ಕರ್ನಾಟಕ

karnataka

ETV Bharat / sports

ಹರಿಣಗಳ ಏಕದಿನ ತಂಡಕ್ಕೆ ಡಿಕಾಕ್ ನಾಯಕ... ಡುಪ್ಲೆಸಿಸ್​ಗೆ ಗೇಟ್​ ಪಾಸ್​ - ಕ್ವಿಂಟನ್​ ಡಿಕಾಕ್​

ದಕ್ಷಿಣ ಆಫ್ರಿಕಾ ತಂಡ ನಾಯಕತ್ವದಲ್ಲಿ ಬದಲಾವಣೆ ಮಾಡಿದ್ದು, ಕಳೆದ ಕೆಲ ದಿನಗಳಿಂದ ಒತ್ತಡಕ್ಕೊಳಗಾಗಿದ್ದ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​ ಸ್ಥಾನಕ್ಕೆ ಕ್ವಿಂಟನ್​ ಡಿಕಾಕ್​ ಆಯ್ಕೆಯಾಗಿದ್ದಾರೆ.

Quinton De Kock
ಏಕದಿನಕ್ಕೆ ಡಿಕಾಕ್​ ಕ್ಯಾಪ್ಟನ್​​

By

Published : Jan 22, 2020, 2:18 AM IST

Updated : Jan 22, 2020, 11:52 AM IST

ಮೆಲ್ಬೋರ್ನ್​​:ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಏಕದಿನ ಕ್ರಿಕೆಟ್​ ತಂಡಕ್ಕೆ ಹೊಸ ನಾಯಕನ ಆಯ್ಕೆ ಮಾಡಿದ್ದು, ಡುಪ್ಲೆಸಿಸ್​​ ಜಾಗಕ್ಕೆ ಕ್ವಿಂಟನ್​ ಡಿಕಾಕ್​ ಆಯ್ಕೆಗೊಂಡಿದ್ದಾರೆ.

ಫೆ. 4ರಿಂದ ವಿಶ್ವಕಪ್​ ವಿಜೇತ ತಂಡ ಇಂಗ್ಲೆಂಡ್​ ವಿರುದ್ಧ ಕೇಪ್​ಟೌನ್​​ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜತೆಗೆ ಈಗಾಗಲೇ ಆಯ್ಕೆಯಾಗಿರುವ 15 ಸದಸ್ಯರ ತಂಡದಲ್ಲಿ ಫಾಫ್​ ಡುಪ್ಲೆಸ್​ರನ್ನು ತಂಡದಿಂದ ಕೈಬಿಟ್ಟಿದ್ದು, ನಾಲ್ವರು ಹೊಸಮುಖಗಳಿಗೆ ಅವಕಾಶ ನೀಡಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕ್ರಿಕೆಟ್​ ಮಂಡಳಿ ಡುಪ್ಲೆಸಿಸ್​ ಹಾಗೂ ರಬಾಡಾ ಅತಿ ಹೆಚ್ಚು ಕ್ರಿಕೆಟ್​ ಆಡಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲು ತೀರ್ಮಾನಿಸಿದ್ದು, ಇಂಗ್ಲೆಂಡ್​ ವಿರುದ್ಧದ ಟಿ-20 ಸರಣಿಗಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಡಿಕಾಕ್​​ 2023 ವಿಶ್ವಕಪ್​ ಕ್ರಿಕೆಟ್​​ವರೆಗೆ ತಂಡವನ್ನ ಮುನ್ನಡೆಸಲಿದ್ದಾರೆ ಎಂದು ತಿಳಿಸಿರುವ ಮಂಡಳಿ, ಡುಪ್ಲೆಸಿಸ್​ ನಾಯಕತ್ವದ ವೇಳೆ ಕೆಲವೊಂದು ಒತ್ತಡಕ್ಕೆ ಒಳಗಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್​ ವಿರುದ್ಧ ಏಕದಿನಕ್ಕೆ ಆಫ್ರಿಕಾ ತಂಡ
ಕ್ವಿಂಟನ್​ ಡಿ ಕಾಕ್​(ನಾಯಕ), ಟೆಂಬಾ ಬವುಮಾ, ಜಾರ್ನ್ ಫಾರ್ಚುನ್, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಸಿಸಂದಾ ಮಗಲಾ, ಜನ್ನೆಮನ್ ಮಲನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಲುಂಗಿ ಎಂಗಿಡಿ, ತಬ್ರೈಜ್ ಶಮ್ಸಿ, ಲೂಥೊ ಸಿಪಮ್ಲಾ, ಜಾನ್-ಜಾನ್ ಸ್ಮಟ್ಸ್, ವ್ಯಾನ್ ಡೆರ್ ಡುಸೆನ್, ಕೈಲ್ ವೆರೆನ್ನೆ.

Last Updated : Jan 22, 2020, 11:52 AM IST

ABOUT THE AUTHOR

...view details