ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ದಕ್ಷಿಣ ಆಫ್ರಿಕಾದ 'ವರ್ಷದ ಕ್ರಿಕೆಟಿಗ ಪ್ರಶಸ್ತಿ' ಪಡೆದ ಕ್ವಿಂಟನ್​ ಡಿ ಕಾಕ್​, ಲೌರಾ ವೋಲ್ವಾರ್ಟ್ - ಕ್ವಿಂಟನ್​ ಡಿಕಾಕ್​ಗೆ ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ ಪ್ರಶಸ್ತಿ

ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಿಕಾಕ್ ಹಾಗೂ ಲೌರಾ ಮೂರು ವಿಭಿನ್ನ ವಿಭಾಗದಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕ್ವಿಂಟನ್ ಡಿಕಾಕ್ ವರ್ಷದ ಟೆಸ್ಟ್ ಆಟಗಾರ ಹಾಗೂ ತನ್ನ ಸಹ ಆಟಗಾರರಿಂದ ಆಯ್ಕೆಯಾಗುವ 'ವರ್ಷದ ಆಟಗಾರ ಪ್ರಶಸ್ತಿ'ಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

CSA Awards
ವರ್ಷದ ಕ್ರಿಕೆಟಿಗ ಪ್ರಶಸ್ತಿ

By

Published : Jul 5, 2020, 12:52 PM IST

ಜೋಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್​ ಡಿಕಾಕ್​ ಹಾಗೂ ಮಹಿಳಾ ತಂಡದ ಯುವ ಆಟಗಾರ್ತಿ ಲೌರಾ ವೋಲ್ವಾರ್ಟ್​ ದಕ್ಷಿಣ ಆಫ್ರಿಕಾದ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಡಿಕಾಕ್​ ವರ್ಷದ ಪುರುಷರ ವಿಭಾಗದಲ್ಲಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದರೆ, ಮಹಿಳಾ ತಂಡದ ವಿಭಾಗದಲ್ಲಿ ಲೌರಾ ವೋಲ್ವಾರ್ಟ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಕೊರೊನಾ ವೈರಸ್ ಲಾಕ್‌ಡೌನ್ ಕಾರಣ ಸಾಂಪ್ರದಾಯಿಕ ಪ್ರಶಸ್ತಿ ಪ್ರದಾನ ಸಮಾರಂಭವು ಸಾಧ್ಯವಾಗಲಿಲ್ಲ. ಆದ್ದರಿಂದ, ಸಿಎಸ್ಎ ವರ್ಚುವಲ್ ಮಾದರಿಯಲ್ಲಿ ನಡೆದ ಸಮಾರಂಭದಲ್ಲಿ ಕ್ರಿಕೆಟ್ ದಕ್ಷಿಣ ಆಫ್ರಿಕಾವು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿದೆ.

ಕ್ವಿಂಟನ್​ ಡಿ ಕಾಕ್

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಕಾಕ್ ಹಾಗೂ ಲೌರಾ ಮೂರು ವಿಭಿನ್ನ ವಿಭಾಗಗಳಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕ್ವಿಂಟನ್ ಡಿಕಾಕ್ ವರ್ಷದ ಟೆಸ್ಟ್ ಆಟಗಾರ ಹಾಗೂ ತನ್ನ ಸಹ ಆಟಗಾರರಿಂದ ಆಯ್ಕೆಯಾಗುವ 'ವರ್ಷದ ಆಟಗಾರ ಪ್ರಶಸ್ತಿ'ಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಲೌರಾ ವೋಲ್ವಾರ್ಟ್

ಡಿಕಾಕ್​ 2017ರಲ್ಲೂ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದರು. ಈ ಮೂಲಕ ಎರಡು ಬಾರಿ ಈ ಪ್ರಶಸ್ತಿ ಪಡೆದ ಜಾಕ್​ ಕಾಲೀಸ್​,(2004-,2011), ಮುಖಾಯ್​ ಎಂಟಿನಿ(2005,2006), ಹಾಸೀಮ್​ ಆಮ್ಲಾ(2010,2013), ಎಬಿ ಡಿ ವಿಲಿಯರ್ಸ್​(2014,2015),ಕಗಿಸೋ ರಬಾಡಾ(2016, 2018) ರಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಈ ಪ್ರಶಸ್ತಿಯನ್ನು 2004ರಿಂದ ನೀಡಲಾಗುತ್ತಿದ್ದು, ಮೇಲಿನವರಲ್ಲದೆ, ಶಾನ್​ ಪೊಲಾಕ್​(2007), ಡೇಲ್​ ಸ್ಟೈನ್​(2008), ಗ್ರೇಮ್ ಸ್ಮಿತ್​(2009), ವೆರ್ನಾನ್​ ಫಿಲಾಂಡರ್​(2012), ಫಾಫ್​ ಡು ಪ್ಲೆಸಿಸ್​(2019)ರಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ABOUT THE AUTHOR

...view details