ದುಬೈ: ಕ್ವಿಂಟನ್ ಡಿಕಾಕ್ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ 176 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಮುಂಬೈ ಪವರ್ಪ್ಲೇ ಮುಗಿಯುವುದರೊಳಗೆ ನಾಯಕ ರೋಹಿತ್ ಶರ್ಮಾ(9) ಸೂರ್ಯಕುಮಾರ್ ಯಾದವ್(0) ಹಾಗೂ ಇಶಾನ್ ಕಿಶನ್(7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ ಈ ಸಂದರ್ಭದಲ್ಲಿ ಡಿಕಾಕ್ ಜೊತೆಗೂಡಿದ ಕೃನಾಲ್ ಪಾಂಡ್ಯ (34) 4ನೇ ವಿಕೆಟ್ಗೆ 58 ರನ್ ಸೇರಿಸಿ ಚೇತರಿಕೆ ನೀಡಿದರು. ಕೃನಾಲ್ ರಿ ಬಿಷ್ಣೋಯ್ ಓವರ್ನಲ್ಲಿ ಔಟಾಗುತ್ತಿದ್ದಂತೆ ಬಂದ ಹಾರ್ದಿಕ್ ಪಾಂಡ್ಯ ಕೇವಲ 8 ರನ್ಗಳಿಸಿ ಔಟಾದರು. ಡಿಕಾಕ್ 43 ಎಸೆತಗಳಲ್ಲಿ ತಲಾ 3 ಸಿಕ್ಸರ್ ಹಾಗೂ ಬೌಂಡರಿಗಳ ನೆರವಿನಿಂದ 53 ರನ್ಗಳಿಸಿದರು.