ಡರ್ಬನ್: ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವೆ ನಡೆದ 19 ವರ್ಷದೊಳಗಿನ ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 69 ರನ್ಗಳ ಜಯ ದಾಖಲಿಸಿದೆ. ಈ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಟೀಂ ಇಂಡಿಯಾ ನೀಡಿದ್ದ 260 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 43.1 ಓವರ್ಗಳಲ್ಲಿ 190 ರನ್ಗಳಿಗೆ ಆಲ್ಔಟ್ ಆಗುವ ಮೂಲಕ 69 ರನ್ಗಳಿಂದ ಸೋಲೊಪ್ಪಿಕೊಂಡಿತು. ದಕ್ಷಿಣ ಆಫ್ರಿಕಾ ತಂಡದ ಪರ ಜಾಕ್ ಲೀಸ್ 52, ಜೊನಾಥನ್ ಬರ್ಡ್ 39 ಮತ್ತು ಟಿಯಾನ್ ವ್ಯಾನ್ ವುರೆನ್ 24 ರನ್ ಗಳಿಸಿದ್ರೆ, ಟೀಂ ಇಂಡಿಯಾ ಪರ ವರುಣ್ ಅಂಕೋಲೆಕರ್ 4, ರವಿ ಬಿಷ್ನೋಯಿ 2 ವಿಕೆಟ್ ಪಡೆದು ಮಿಂಚಿದ್ರು.