ಕರ್ನಾಟಕ

karnataka

ETV Bharat / sports

ಕೊರೊನಾ ಪೀಡಿತರ ನೆರವಿಗೆ ಪಾಕ್‌ ಕ್ರಿಕೆಟಿಗನಿಂದ ಜೆರ್ಸಿ, ಬ್ಯಾಟ್‌ ಹರಾಜು - corona virus

ಅಜರ್​ ಅಲಿ ಬ್ಯಾಟ್​ ಅನ್ನು ಪುಣೆ ಮೂಲದ ಬ್ಲೇಡ್ಸ್​ ಆಫ್​ ಗ್ಲೋರಿ ಮ್ಯೂಸಿಯಂ 10 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ಚಾಂಪಿಯನ್​ ಟ್ರೋಫಿಯಲ್ಲಿ ಧರಿಸಿದ್ದ ಜೆರ್ಸಿಯನ್ನು 11 ಲಕ್ಷ ರೂಗೆ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಪಾಕ್​ ಮೂಲದ ಕಾಶ್​ ವಿಲಾನಿ ಖರೀದಿಸಿದ್ದಾರೆ.

ಅಜರ್​ ಅಲಿ
ಅಜರ್​ ಅಲಿ

By

Published : May 9, 2020, 10:01 AM IST

ನವದೆಹಲಿ: ಪಾಕಿಸ್ತಾನ ಟೆಸ್ಟ್​ ತಂಡದ ನಾಯಕ ಅಜರ್​ ಅಲಿ ಕೊರೊನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವು ನೀಡಲು ಹರಾಜಿಗಿಟ್ಟಿದ್ದ ಬ್ಯಾಟ್​ ಹಾಗೂ ಜರ್ಸಿ 22 ಲಕ್ಷ ರೂ ಸಂಗ್ರಹಿಸಿದೆ.

2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಡೇ ಆ್ಯಂಡ್​ ನೈಟ್​ ಟೆಸ್ಟ್‌ನಲ್ಲಿ ಅಜರ್ ಅಲಿ ತ್ರಿಶತಕ (301) ಬಾರಿಸಿದ್ದರು. ಇದು ಹಗಲು ರಾತ್ರಿ​ ಟೆಸ್ಟ್​ಪಂದ್ಯವೊದರಲ್ಲಿ ದಾಖಲಾಗಿದ್ದ ಮೊದಲ ತ್ರಿಶತಕದ ದಾಖಲೆಯಾಗಿತ್ತು. ಈ ಬ್ಯಾಟ್​ ಜೊತೆಗೆ 2017ರ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಫೈನಲ್‌ನಲ್ಲಿ ಅವರು ಧರಿಸಿದ್ದ ಜೆರ್ಸಿಯನ್ನು ಪಾಕ್​ ತಂಡ ಆನ್​ಲೈನ್​ನಲ್ಲಿ ಹರಾಜಿಗಿಟ್ಟಿತ್ತು. ಇವರೆಡರ ಮೂಲಬೆಲೆ 10 ಲಕ್ಷ ಪಾಕಿಸ್ತಾನ ರೂಪಾಯಿ ಎಂದು ತಿಳಿಸಿದ್ದರು.

ಅಜರ್​ ಅಲಿಯ ಒಳ್ಳೆಯ ಉದ್ದೇಶಕ್ಕಾಗಿ ನ್ಯೂಜೆರ್ಸಿಯಲ್ಲಿರುವ ಪಾಕಿಸ್ತಾನ ಮೂಲದ ಜಮಲ್ ಖಾನ್ ಒಂದು ಲಕ್ಷ ರೂ ದೇಣಿಗೆ ನೀಡಿದ್ದಾರೆ. ಈಗಾಗಲೇ ಭಾರತ ತಂಡದ ಕೆ.ಎಲ್. ರಾಹುಲ್, ಇಂಗ್ಲೆಂಡ್ ತಂಡದ ವಿಕೆಟ್​ ಕೀಪರ್​ ಕೂಡಾ ವಿಶ್ವಕಪ್​ನಲ್ಲಿ ತಾನು ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿದ್ದರು.

ABOUT THE AUTHOR

...view details