ಕರ್ನಾಟಕ

karnataka

ETV Bharat / sports

ಒಂದೇ ಇನ್ನಿಂಗ್ಸ್​ನಲ್ಲಿ ವಿಷ್ಣುವಿನ ತಾಳ್ಮೆ, ನರಸಿಂಹನ ಉಗ್ರರೂಪ ತೋರಿಸಿದ ಪೂಜಾರ... ಟೀಕೆಗಾರರು ನಿಶಬ್ಧ! - ರೋಹಿತ್ ಶರ್ಮಾ ಶತಕ

61 ಎಸೆತಗಳಲ್ಲಿ ಕೇವಲ 8 ರನ್​ಗಳಿಸಿದ ಪೂಜಾ ನಂತರದ 87 ಎಸೆತಗಳಲ್ಲಿ 71 ರನ್​ ಸಿಡಿಸುವ ಮೂಲಕ ಒಂದೇ ದಿನ ತಮ್ಮ ಎರಡು ಮುಖ ತೋರಿಸಿಕೊಟ್ಟಿದ್ದಾರೆ.

Pujara

By

Published : Oct 5, 2019, 5:11 PM IST

ವಿಶಾಖಪಟ್ಟಣ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​ ಗೆಲ್ಲುವ ವಿಶ್ವಾಸದಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಂಡು 2ನೇ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾಗೆ ಪೂಜಾರ ಅಡ್ಡಗೋಡೆಯಾಗಬಹುದು ಎಂದುಕೊಳ್ಳುತ್ತಿರವಾಗಲೇ ಪೂಜಾರ ರೌದ್ರವತಾರದ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ 76 ರನ್​ಗಳ ಮುನ್ನಡೆ ಪಡೆದಿದ್ದ ಟೀಮ್​ ಇಂಡಿಯಾ ಈ ಪಂದ್ಯ ಗೆಲ್ಲಬೇಕಾದರೆ ಈ ದಿನವೇ ಉತ್ತಮ 300 ಕ್ಕೂ ಹೆಚ್ಚು ರನ್​ ಗುರಿ ನೀಡುವ ಆಲೋಚನೆಯಲ್ಲಿತ್ತು ಆದರೆ ಅಗರ್​ವಾಲ್​(7) ಔಟಾದ ನಂತರ ಕ್ರೀಸ್​ಗೆ ಬಂದ ಪೂಜಾರ ಕೆಲವು ಸಮಯ ತೀರಾ ನಿಧಾನಗತಿ ಆಟ ಪ್ರದರ್ಶನ ಮಾಡಿ ಅಭಿಮಾನಿಗಳಿಗೆ ಹಾಗೂ ನಾನ್​ಸ್ಟ್ರೈಕರ್​ನಲ್ಲಿದ್ದ ರೋಹಿತ್​ ಕೋಪಕ್ಕೂ ತುತ್ತಾದರು.

ರೋಹಿತ್​ 47 ರನ್​ಗಳಿಸಿದ್ದ ವೇಳೆ 61 ಎಸೆತಗಳಲ್ಲಿ ಕೇವಲ 8 ರನ್​ಗಳಿಸಿದ್ದ ಪೂಜಾರ ಇದ್ದಕ್ಕಿದ್ದಂತೆ ಟಿ20 ರೂಪ ತಾಳಿ ದಕ್ಷಿಣ ಆಫ್ರಿಕಾದ ಬೌಲರ್​ಗಳನ್ನು ಚೆಂಡಾಡಿದರು. ಸತತ ಬೌಂಡರಿಗಳ ಮೂಲಕ 106 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಪೂಜಾರ ಒಂದು ಹಂತದಲ್ಲಿ ರೋಹಿತ್​ರನ್ನೇ ಹಿಂದಿಕ್ಕಿ 70ರ ಗಡಿದಾಟಿದರು.

ರೋಹಿತ್​ ಶರ್ಮಾ ಬೌಗುಳದಿಂದಲೋ ಟೀಕೆ ಗುರಿಯಾಗಬೇಕೆಂಬ ಬಯದಿಂದಲೋ ಸ್ಫೋಟಕ ಆಟಕ್ಕೆ ಮೊರೆ ಹೋದ ಪೂಜಾರ 81 ರನ್​ಗಳಿಸಿದ್ದ ವೇಳೆ ಪಿಲಾಂಡರ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಅವರ ಇನ್ನಿಂಗ್ಸ್​ನಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್​ ದಾಖಲಾಗಿತ್ತು.

ABOUT THE AUTHOR

...view details