ಕರಾಚಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್ ಗಿಬ್ಸ್ ಪಿಎಸ್ಎಲ್ನ ಹಾಲಿ ಚಾಂಪಿಯನ್ ಕರಾಚಿ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ಶನಿವಾರ ನೇಮಕಗೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡದ ಡೀನ್ ಜೋನ್ಸ್ ಕಳೆದ 2 ಆವೃತ್ತಿಯಲ್ಲಿ ಕರಾಚಿ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಆದರೆ 59ನೇ ವಯಸ್ಸಿನ ಆಸೀಸ್ ಲೆಜೆಂಡ್ ಕಳೆದ ವರ್ಷ ಮುಂಬೈನ ಹೋಟೆಲ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ನಂತರ ಹಂಗಾಮಿ ಕೋಚ್ ಆಗಿ ವಾಸೀಮ್ ಅಕ್ರಮ್ ನೇಮಕವಾಗಿದ್ದರು.
ಆಕ್ರಮಣಕಾರಿ ಮತ್ತು ಉತ್ಸಾಹದಿಂದ ಆಟದ ಗತಿಯನ್ನೇ ಬದಲಾಯಿಸುತ್ತಿದ್ದ ಹರ್ಷೆಲ್ ಗಿಬ್ಸ್ ಕೋಚ್ ಆಗಿಯೂ ಅದೇ ರೀತಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಭಾವಿಸಿದ್ದೇವೆ. ಸಂಪೂರ್ಣ ಮತ್ತು ಶಿಸ್ತಿನ ಬಲದಲ್ಲಿ ಉತ್ತಮ ನಂಬಿಕೆಯುಳ್ಳ ಅವರನ್ನು ಕರಾಚಿ ಕಿಂಗ್ಸ್ನ ಹೊಸ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಹೇಳಲು ಹೆಮ್ಮ ಪಡುತ್ತೇವೆ ಎಂದು ಫ್ರಾಂಚೈಸಿ ಟ್ವೀಟ್ ಮಾಡಿದೆ.
ಹರ್ಷೆಲ್ ಗಿಬ್ಸ್ ದಕ್ಷಿಣ ಆಫ್ರಿಕಾ ಪರ 90 ಟೆಸ್ಟ್ ಪಂದ್ಯಗಳಿಂದ 6167 ರನ್, 248 ಏಕದಿನ ಪಂದ್ಯಗಳಿಂದ 8094 ರನ್, 23 ಟಿ-20 ಪಂದ್ಯಗಳಿಂದ 400 ರನ್ ಬಾರಿಸಿದ್ದಾರೆ.