ಕರಾಚಿ: ಎರಡು ಫ್ರಾಂಚೈಸಿಯ 6 ಆಟಗಾರರಿಗೆ ಕೋವಿಡ್ 19 ದೃಢಪಟ್ಟ ಹಿನ್ನೆಲೆ ತಕ್ಷಣವಾಗಿ 6ನೇ ಆವೃತ್ತಿಯ ಪಾಕಿಸ್ತಾನ ಪ್ರೀಮಿಯರ್ ಲೀಗ್ಅನ್ನು ಮುಂದೂಡಿರುವುದಾಗಿ ಪಿಸಿಬಿ ತಿಳಿಸಿದೆ.
ಪಿಎಸ್ಎಲ್ ಎಲ್ಲಾ 6 ಫ್ರಾಂಚೈಸಿಗಳು ಮತ್ತು ಟೂರ್ನಿ ಆಯೋಜಕರ ಜೊತೆ ವರ್ಚುವಲ್ ಸಭೆ ನಡೆಸಿದ ನಂತರ ಪಿಸಿಬಿ ಮಧ್ಯಂತರದಲ್ಲಿ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಣೆ ಹೊರಡಿಸಿದೆ.
34 ಪಿಎಸ್ಎಲ್ ಪಂದ್ಯಗಳಲ್ಲಿ ಕೇವಲ 14 ಪಂದ್ಯಗಳು ನಡೆದಿವೆ. ಇದೀಗ ಸೋಮವಾರದಿಂದ ಇಲ್ಲಿಯವರೆಗೆ ಒಟ್ಟು 7 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲಾ ಆಟಗಾರರಿಗೆ ಸುರಕ್ಷತೆ ಹೆಚ್ಚಿನ ಮಹತ್ವ ನೀಡಿ ಟೂರ್ನಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ.
ಎಲ್ಲಾ ಸ್ಪರ್ಧಿಗಳ ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ಗಮನಹರಿಸುತ್ತೇವೆ. ಜೊತೆಗೆ ಮತ್ತೊಮ್ಮೆ ಪಿಸಿಆರ್ ಪರೀಕ್ಷೆ ನಡೆಸುವುದರ ಜೊತೆಗೆ ಲಸಿಕೆ ಹಾಗೂ ಐಸೋಲೇಶನ್ ವ್ಯವಸ್ಥೆಗಳನ್ನು ಎಲ್ಲಾ ಆರು ತಂಡಗಳಿಗೂ ಮಾಡಿಕೊಡಲಾಗುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ:6 ಬಾಲ್ಗೆ 6 ಸಿಕ್ಸರ್ ಸಿಡಿಸಿ ಅಬ್ಬರ: ಯುವರಾಜ್ ದಾಖಲೆ ಸರಿಗಟ್ಟಿದ ಪೊಲಾರ್ಡ್!