ನವದೆಹಲಿ:ಭಾರತ ಕ್ರಿಕೆಟ್ ಕಂಡಿರುವ ಶ್ರೇಷ್ಠ ನಾಯಕರಲ್ಲಿ ಅಗ್ರಸ್ಥಾನದಲ್ಲಿರುವ ಎಂ.ಎಸ್.ಧೋನಿ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಈ ವಿಚಾರ ಅವರ ಕೋಟ್ಯಂತರ ಅಭಿಮಾನಿಗಳಿಗೆ ನಿರಾಶೆ ತಂದಿದ್ದರೂ, ಭಾರವಾದ ಮನಸ್ಸಿನಿಂದಲೇ ಧೋನಿಯ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ.
ಧೋನಿ ನಿವೃತ್ತಿಗೆ ಪತ್ನಿ ಸಾಕ್ಷಿ ಕೂಡ ಹೃದಯಸ್ಪರ್ಶಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ನಿಮ್ಮ ಸಾಧನೆ ನಮಗೆ ಹೆಮ್ಮೆ ತಂದಿದೆ. ನಿಮ್ಮ ಜೀವನಕ್ಕೆ ಅತ್ಯಂತ ಉತ್ಸಾಹ ತಂದುಕೊಡುತ್ತಿದ್ದ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವಾಗ ನೀವು ಕಣ್ಣೀರಿಟ್ಟಿರುತ್ತೀರಾ' ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.