ಕರ್ನಾಟಕ

karnataka

ETV Bharat / sports

ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಅಣ್ಣನನ್ನು ಪ್ರಶಂಸಿಸಿದ ಹಾರ್ದಿಕ್​ ಪಾಂಡ್ಯ - ವಿಂಡೀಸ್​-ಭಾರತ

ವಿಂಡೀಸ್​ ವಿರುದ್ಧದ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೃನಾಲ್​ ಪಾಂಡ್ಯ ಅವರನ್ನು ಅವರ ಸಹೋದರ ಹಾರ್ದಿಕ್​ ಪಾಂಡ್ಯ ಟ್ವಿಟರ್​ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

Hardik Pandya

By

Published : Aug 7, 2019, 9:51 PM IST

ಮುಂಬೈ:ವಿಂಡೀಸ್​ ವಿರುದ್ಧದ ಟಿ-20 ಸರಣಿಯನ್ನು 3-0 ಯಲ್ಲಿ ಗೆದ್ದಿರುವ ಭಾರತ ತಂಡವನ್ನು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೃನಾಲ್​ ಪಾಂಡ್ಯರನ್ನು ಅವರ ಸಹೋದರ ಹಾರ್ದಿಕ್​ ಪಾಂಡ್ಯ ಪ್ರಶಂಸಿಸಿದ್ದಾರೆ.

ಮೂರು ಪಂದ್ಯಗಳಲ್ಲೂ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ಪಾಂಡ್ಯ ಎರಡನೇ ಪಂದ್ಯದದಲ್ಲಿ ಕೊನೆಯ ಓವರ್​ನಲ್ಲಿ 2 ಸಿಕ್ಸರ್​ ಸಿಡಿಸಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾಗಿದ್ದರು. ಅಲ್ಲದೆ ಮೊದಲನೇ ಪಂದ್ಯದಲ್ಲಿ 1 ವಿಕೆಟ್​ ಹಾಗೂ ಎರಡನೇ ಪಂದ್ಯದಲ್ಲಿ 2 ವಿಕೆಟ್​ ಪಡೆದಿದ್ದರು. ಈ ಸಾಧನೆಗೆ ಅವರನ್ನು ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದು ಬಂದಿತ್ತು.

ಭಾರತ ತಂಡ 3-0ಯಲ್ಲಿ ಸರಣಿ ಗೆದ್ದಿರುವುದನ್ನು ತಮ್ಮ ಟ್ವಿಟರ್​ನಲ್ಲಿ ಶುಭಕೋರಿರುವ ಪಾಂಡ್ಯ, ಭಾರತ ತಂಡ ಏಕಪಕ್ಷೀಯವಾಗಿ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೃನಾಲ್​ ಪಾಂಡ್ಯಗೆ ಅಭಿನಂದನೆಗಳು, ನಿನ್ನ ಸಾಧನೆ ನನಗೆ ಹೆಮ್ಮೆ ತರಿಸಿದೆ ಅಣ್ಣ ಎಂದು ಟ್ವೀಟ್​ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್​ಗಳಿಂದ ಗೆಲುವು ಸಾಧಿಸಿದರೆ, ಎರಡನೇ ಪಂದ್ಯವನ್ನು ಡಿಎಲ್​ಎಸ್​ ನಿಯಮದನ್ವಯ 22 ರನ್​ಗಳ ಜಯ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್​ ಸ್ವೀಪ್​ ಸಾಧಿಸಿತ್ತು.

ABOUT THE AUTHOR

...view details