ಮುಂಬೈ:ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಯುಒಇಸಿಎ ಮೊದಲೆರಡು ಪಂದ್ಯಗಳಿಗೆ 15 ಸದಸ್ಯರ ತಂಡವನ್ನು ಘೋಷಣೆ ಮಾಡಿದ್ದು, ಅಂಡರ್-19 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಪ್ರಿಯಂ ಗರ್ಗ್ಗೆ ನಾಯಕತ್ವ ನೀಡಲಾಗಿದೆ.
ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಶುಕ್ರವಾರ ಈ ತಂಡವನ್ನು ಘೋಷಿಸಿದೆ. 2020ರಲ್ಲಿ ಪ್ರಿಯಂ ಗರ್ಗ್ ಭಾರತ ಕಿರಿಯರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅಜೇಯ ಫೈನಲ್ ಪ್ರವೇಶಿಸಿದ್ದ ತಂಡ ಫೈನಲ್ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿತ್ತು. ನಂತರ ಐಪಿಎಲ್ನಲ್ಲೂ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.
ಯುಪಿ ತಂಡದಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ಭುವನೇಶ್ವರ್ ಕುಮಾರ್ ಮತ್ತು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಸುರೇಶ್ ರೈನಾ ಕೂಡ ಅವಕಾಶ ಪಡೆದಿದ್ದಾರೆ. ಆಲ್ರೌಂಡರ್ ಕರ್ಣ್ ಶರ್ಮಾ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ತಂಡದಲ್ಲಿ ಅವಕಾಶ ಪಡೆದಿರುವ ಇನ್ನಿತರ ಸ್ಟಾರ್ ಆಟಗಾರರೆಂದರೆ ರಿಂಕು ಸಿಂಗ್, ಅಂಕಿತ್ ರಜಪೂತ್, ಶಿವಂ ಮಾವಿ ಕೂಡ ದೇಶಿ ಟಿ-20 ಲೀಗ್ನಲ್ಲಿ ಆಡಲಿದ್ದಾರೆ.