ಕರ್ನಾಟಕ

karnataka

ETV Bharat / sports

ಪ್ರಿಯಂ ಗರ್ಗ್​ ಶತಕ... ದ.ಆಫ್ರಿಕಾ ವಿರುದ್ಧ ಭಾರತ ಅಂಡರ್​​​ 19 ತಂಡಕ್ಕೆ 66 ರನ್​ಗಳ ಭರ್ಜರಿ ಜಯ - ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 66 ರನ್​ಗಳ ಜಯ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಭಾರತ, ಜಿಂಬಾಬ್ವೆ, ನ್ಯೂಜಿಲ್ಯಾಂಡ್​ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಚತುಷ್ಕೋನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕಿರಿಯರ ತಂಡ ಗೆಲುವಿನೊಂದಿಗೆ ಖಾತೆ ತೆರೆದಿದೆ.

Priyam Garg  century
Priyam Garg century

By

Published : Jan 4, 2020, 1:46 PM IST

ಡರ್ಬನ್​:ನಾಯಕ ಪ್ರಿಯಂ ಗರ್ಗ್​ ಅವರ ಆಕರ್ಷಕ ಶತಕದ ನೆರವಿನಿಂದ ಅಂಡರ್​ 19 ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 66 ರನ್​ಗಳ ಜಯ ಸಾಧಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಭಾರತ, ಜಿಂಬಾಬ್ವೆ, ನ್ಯೂಜಿಲ್ಯಾಂಡ್​ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಚತುಷ್ಕೋನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕಿರಿಯರ ತಂಡ ಗೆಲುವಿನೊಂದಿಗೆ ಖಾತೆ ತೆರೆದಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಭಾರತ ತಂಡ ಸ್ಫೋಟಕ ಬ್ಯಾಟ್ಸಮನ್​ ಯಶಸ್ವಿ ಜೈಸ್ವಾಲ್​(13) ಹಾಗೂ ದಿವ್ಯಾನ್ಶ್​ ಸಕ್ಸೇನಾ (7) ಅವರ ವಿಕೆಟ್​​ ಕಳೆದುಕೊಂಡು ಆಘಾತ ಅನುಭವಿಸಿತ್ತು.

ಆದರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ​ ಬಂದ ತಿಲಕ್​ ವರ್ಮಾ(42) ಹಾಗೂ ಪ್ರಿಯಂ ಗರ್ಗ್​(110) 3ನೇ ವಿಕೆಟ್​ ಜೊತೆಯಾಟಕ್ಕೆ 91 ರನ್​ ಸೇರಿಸಿದರು. 69 ಎಸೆತಗಳನ್ನೆದುರಿಸಿದ ತಿಲಕ್​ 4 ಬೌಂಡರಿ ಸಹಿತ 42 ರನ್​ ಗಳಿಸಿ ಔಟಾದರು.

ನಂತರ ಬಂದ ವಿಕೆಟ್​ ಕೀಪರ್​ ದೃವ್​ ಜುರೆಲ್​ ನಾಯಕ ಗರ್ಗ್​ ಜೊತೆ ಸೇರಿ 5ನೇ ವಿಕೆಟ್​ಗೆ 104 ರನ್​ ಸೇರಿಸಿದರು. 74 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್​ ಸಹಿತ 65 ರನ್ ​ಗಳಿಸಿ ಔಟಾದರು. ನಾಯಕ ಪ್ರಿಯಂ ಗರ್ಗ್ ​103 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 110 ರನ್​ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಮಂಡಿ ಖುಮಾಲೊ 4 ವಿಕೆಟ್​ ಹಾಗೂ ಅಚಿಲ್​ ಕ್ಲೋಯೆಟ್​ ಒಂದು ವಿಕೆಟ್​ ಪಡೆದರು.

265 ರನ್​ಗಳ ಟಾರ್ಗೆಟ್​ ಪಡೆದ ದಕ್ಷಿಣ ಆಫ್ರಿಕಾ ತಂಡ ಭಾರತೀಯ ಬೌಲಿಂಗ್​ ದಾಳಿಗೆ ತತ್ತರಿಸಿ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು198 ರನ್​ಗಳಿಸಲಷ್ಟೇ ಶಕ್ತವಾಯಿತು.

ದಕ್ಷಿಣ ಆಫ್ರಿಕಾ ಪರ ಆರಂಭಿಕರಾದ ಆ್ಯಂಡ್ರಿವ್​ ಲೋವ್​ 45, ನಾಯಕ ಬ್ರೈಸ್​ ಪರ್ಸನ್ಸ್​ 57 ರನ್​ ಗಳಿಸಿ ಗೆಲುವಿಗಾಗಿ ಪ್ರತಿರೋಧ ತೋರಿದರಾದರು ಉಳಿದ ಬ್ಯಾಟ್ಸ್​ಮನ್​ಗಳು ವಿಫಲವಾಗಿದ್ದರಿಂದ ಸೋಲನಭವಿಸಬೇಕಾಯಿತು.

ಭಾರತದ ಪರ ಸುಶಾಂತ್ ಮಿಶ್ರಾ 4 ವಿಕೆಟ್​​, ರವಿ ಬಿಶೋನಿ 2 ವಿಕೆಟ್​, ಅಥರ್ವ ಅಂಕೋಲೆಕರ್​, ಕಾರ್ತಿಕ್​ ತ್ಯಾಗಿ ಹಾಗೂ ತಿಲಕ್​ ವರ್ಮಾ ತಲಾ ಒಂದು ವಿಕೆಟ್​ ಪಡೆದು ಗೆಲವಿನ ರೂವಾರಿಯಾದರು. ಶತಕ ಸಿಡಿಸಿದ ಪ್ರಿಯಂ ಗರ್ಗ್​ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮತ್ತೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಜಿಂಬಾಬ್ವೆ ವಿರುದ್ಧ 2 ರನ್​ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್​ ನಡೆಸಿದ್ದ ಕಿವೀಸ್​ 204 ರನ್ ​ಗಳಿಸಿದರೆ, ಜಿಂಬಾಬ್ವೆ 41 ಓವರ್​ಗಳಲ್ಲಿ 202 ರನ್​ಗಳಿಗೆ ಆಲೌಟಾಗಿ ನಿರಾಶೆ ಅನುಭವಿಸಿತು.

ABOUT THE AUTHOR

...view details