ಲಿಂಕನ್:ಫಿಟ್ನೆಸ್ ಸಾಬೀತುಪಡಿಸಿ ಏಕಾಂಗಿಯಾಗಿ ಕಿವೀಸ್ ಪ್ರವಾಸಕ್ಕೆ ತೆರಳಿದ್ದ ಪೃಥ್ವಿ ಶಾ ನ್ಯೂಜಿಲ್ಯಾಂಡ್ ಎ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭರ್ಜರಿ 150 ರನ್ಗಳಿಸಿ ಮಿಂಚಿದ್ದಾರೆ.
3 ಅನಧಿಕೃತ ಏಕದಿನ ಪಂದ್ಯ, 2 ಅನಧಿಕೃತ ಟೆಸ್ಟ್ ಪಂದ್ಯಗಳನ್ನಾಡಲು ಭಾರತ ಎ ತಂಡ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದೆ. ಈ ಸರಣಿಗಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಯುವ ಆಟಗಾರ ಕಿವೀಸ್ ಬೌಲರ್ಗಳನ್ನು ಚೆಂಡಾಡಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಶುಬ್ಮನ್ ಗಿಲ್ ಪಡೆ 49.2 ಓವರ್ಗಳಲ್ಲಿ 372 ರನ್ಗಳಿಸಿ ಆಲೌಟ್ ಆದರೆ ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್ ಎ ತಂಡ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 360 ರನ್ಗಳಿಸಿ 12 ರನ್ಗಳ ಸೋಲನುಭವಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ 100 ಎಸೆತಗಳಲ್ಲಿ 22 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 150 ರನ್ಗಳಿಸಿದರೆ, ವಿಜಯ್ ಶಂಕರ್ 58, ಮಯಾಂಕ್ ಅಗರ್ವಾಲ್ 32, ಶುಬ್ಮನ್ ಗಿಲ್ 24, ಸೂರ್ಯಕುಮಾರ್ ಯಾದವ್ 26, ಕೃನಾಲ್ ಪಾಂಡ್ಯ 32 ರನ್ಗಳಿಸಿದರು.