ಮುಂಬೈ: ಭಾರತ ತಂಡದ ಯುವ ಬ್ಯಾಟ್ಸ್ಮನ್ ಹಾಗೂ ಭವಿಷ್ಯದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ನ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಪ್ರತಿ ಬಾರಿ ಮಾತನಾಡುವಾಗ ಶಾರುಖ್ ಖಾನ್ರ ಚೆಕ್ ದೇ ಇಂಡಿಯಾ ಸಾಂಗ್ ಬ್ಯಾಕ್ಗ್ರೌಂಡ್ನಲ್ಲಿ ಕೇಳಿದಂತಾಗುತ್ತದೆ ಎಂದಿದ್ದಾರೆ.
2018ರ ಅಂಡರ್-19 ವಿಶ್ವಕಪ್ನಲ್ಲಿ ನಾಯಕನಾಗಿ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟ ಅದೇ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಪೃಥ್ವಿ ಶಾ ಪ್ರತಿಯೊಬ್ಬರನ್ನು ಆಕರ್ಷಿಸಿದ್ದರು. ಆದರೆ 2020ರಲ್ಲಿ ಮಂಕಾದ ಶಾ 13 ಪಂದ್ಯಗಳಲ್ಲಿ ಕೇವಲ 228 ರನ್ ಗಳಿಸಿದ್ದರು. ಆದರೆ ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿದ್ದಾರೆ. ಈಗಾಗಲೇ ವಿಜಯ್ ಹಜಾರೆ ಟ್ರೋಫಿಯಲ್ಲಿ 800ಕ್ಕೂ ಹೆಚ್ಚಿನ ರನ್ ಸಿಡಿಸಿದ್ದಲ್ಲದೆ, ನಾಯಕನಾಗಿ ಮುಂಬೈ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
"ಬಾಸ್(ಪಾಂಟಿಂಗ್) ಇಸ್ ಬ್ಯಾಕ್. ಅವರು ತುಂಬಾ ಒಳ್ಳೆಯ ವ್ಯಕ್ತಿ. ಮೈದಾನದಲ್ಲಿ ಅವರು ಬಾಸ್ ಇದ್ದಂತೆ, ಮೈದಾನದ ಹೊರಗೆ ಅವರು ಸ್ನೇಹಿತನಂತಿರುತ್ತಾರೆ. ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಈ ವರ್ಷ ಹೇಗಿರುತ್ತದೆ ಎಂಬುದನ್ನು ನೋಡೋಣ. ಖಂಡಿತವಾಗಿ ರಿಕಿ ಸರ್ ಮಾತನಾಡುವಾಗ ಶಾರುಖ್ ಖಾನ್ ಅವರ ಹಾಡು (ಚೆಕ್ ದೇ ಇಂಡಿಯಾ) ಹಾಡನ್ನು ಹಿನ್ನೆಲೆಯಲ್ಲಿ ಹಾಡಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಮಂಗಳವಾರ ಕ್ಯಾಪಿಟಲ್ಸ್ ಹಂಚಿಕೊಂಡ ವೀಡಿಯೊದಲ್ಲಿ ಶಾ ಹೇಳಿದ್ದಾರೆ.
ರಿಕಿ ಪಾಂಟಿಂಗ್ 2018ರಲ್ಲಿ ಕೋಚ್ ಆದ ಮೇಲೆ ಡೆಲ್ಲಿ ತಂಡದ ಅದೃಷ್ಟವೇ ಬದಲಾಯಿತು. ಆ ವರ್ಷ ಕೊನೆಯ ಸ್ಥಾನಿಯಾಗಿದ್ದ ತಂಡ 2019ರಲ್ಲಿ 7 ವರ್ಷಗಳ ನಂತರ ಫ್ಲೇ ಆಫ್ ತಲುಪಿ 3ನೇ ಸ್ಥಾನ ಪಡೆದಿತ್ತು. ನಂತರ 2020ರಲ್ಲಿ ಫೈನಲ್ ತಲುಪಿ ರನ್ನರ್ ಅಪ್ ಆಗಿತ್ತು.
ಇದನ್ನು ಓದಿ:ಪೃಥ್ವಿ ಶಾ ಅದೊಂದು ಕೆಟ್ಟ ಸಿದ್ಧಾಂತ ಬದಲಾಯಿಸಿಕೊಂಡ್ರೆ ಭಾರತದ ಸೂಪರ್ ಸ್ಟಾರ್ ಆಗ್ತಾರೆ : ಪಾಂಟಿಂಗ್ ಭವಿಷ್ಯ