ಜೈಪುರ:ಸೋಮವಾರ ನಡೆದ ಲೀಗ್ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡವನ್ನು 200 ರನ್ಗಳಿಂದ ಬಗ್ಗುಬಡಿದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮುಂಬೈ ತಂಡಕ್ಕೆ ಆಘಾತ ಎದುರಾಗಿದೆ, ಪ್ರಮುಖ ಆಟಗಾರರು ತಂಡದಿಂದ ಹೊರಬಂದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೂ ಮುನ್ನ ಅಹ್ಮದಾಬಾದ್ಗೆ ಬರಬೇಕೆಂದು ಭಾರತ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರಿಗೆ ಬಿಸಿಸಿಐ ಸೂಚಿಸಿದ ಬಳಿಕ, ಸೂರ್ಯಕುಮಾರ ಯಾದವ್, ಶಾರ್ದುಲ್ ಠಾಕೂರ್ ಮತ್ತು ಶ್ರೇಯಸ್ ಅಯ್ಯರ್ ಮುಂಬೈ ತಂಡದಿಂದ ಹೊರಬಂದಿದ್ದಾರೆ. ಇದೀಗ ತಂಡವನ್ನು ಯುವ ಆಟಗಾರ ಪೃಥ್ವಿ ಶಾ ಮುನ್ನಡೆಸಲಿದ್ದಾರೆ.
ಟೂರ್ನಿಯಲ್ಲಿ ಸೂರ್ಯಕುಮಾರ ಯಾದವ್ 5 ಪಂದ್ಯಗಳಿಂದ 332 ರನ್ಗಳಿಸಿದ್ದರು. 4 ಪಂದ್ಯಗಳಿಂದ 2 ಶತಕ ಸಹಿತ 260 ರನ್ಗಳಿಸಿದ್ದರು. ಇನ್ನು ಕೊನೆಯ ಲೀಗ್ ಪಂದ್ಯದಲ್ಲಿ ಠಾಕೂರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು, ಇದೀಗ ಈ ಮೂರು ಆಟಗಾರರು ಹೊರಬಂದ ಹಿನ್ನಲೆ ಮುಂಬೈ ತಂಡದ ಜವಾಬ್ದಾರಿ ಶಾ ಮತ್ತು ಆದಿತ್ಯ ತಾರೆ ಹೆಗಲಿಗೆ ಬಂದಿದೆ.