ಜೈಪುರ:ಪೃಥ್ವಿ ಶಾ ಅವರ ಅಜೇಯ ಶತಕ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಮುಂಬೈ ತಂಡ ವಿಜಯ್ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ವಿರುದ್ಧ 7 ವಿಕೆಟ್ಗಳ ಸುಲಭದ ಜಯ ಸಾಧಿಸಿದೆ.
ಜೈಪುರಿಯ ವಿದ್ಯಾಲಯ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿ ಕೇವಲ 211 ರನ್ಗಳಿಗೆ ಆಲೌಟ್ ಮಾಡಿತು. ಧವಳ್ ಕುಲಕರ್ಣಿ 3 ವಿಕೆಟ್, ಶಾಮ್ಸ್ ಮುಲಾನಿ 2 ವಿಕೆಟ್ ಪಡೆದು ಮಿಂಚಿದರು.
ಡೆಲ್ಲಿ ಪರ ಹಿಮ್ಮತ್ ಸಿಂಗ್ ಅಜೇಯ 106 ರನ್ ಗಳಿಸಿದರೆ, ಶಿವಂಕ್ ವಶಿಷ್ಠ್ 55 ಹಾಗೂ ನಾಯಕ ಪ್ರದೀಪ್ ಸಂಗ್ವಾನ್ ಅಜೇಯ 28 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅನುಭವಿ ಬ್ಯಾಟ್ಸ್ಮನ್ ಧವನ್ ಸಹಿತ 6 ಬ್ಯಾಟ್ಸ್ಮನ್ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.