ನವದೆಹಲಿ: ಮುಂಬೈ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ವಿಜಯ್ ಹಜಾರೆ ಟ್ರೋಫಿಯಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ಮೂಲಕ ಕನ್ನಡಿಗ ಮಯಾಂಕ್ ಅಗರವಾಲ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಕರ್ನಾಟಕದ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 122 ಎಸೆತಗಳಲ್ಲಿ 165 ರನ್ ಗಳಿಸುವ ಮೂಲಕ ಒಂದೇ ಟೂರ್ನಿಯಲ್ಲಿ ನಾಲ್ಕು ಶತಕ ಸಿಡಿಸಿರುವ ದಾಖಲೆ ನಿರ್ಮಾಣ ಮಾಡಿದ್ದು, ಜತೆಗೆ ಈ ಹಿಂದೆ ಕನ್ನಡಿಗ ಅಗರವಾಲ್ರಿಂದ ನಿರ್ಮಣಗೊಂಡಿದ್ದ ದಾಖಲೆ ಬ್ರೇಕ್ ಮಾಡಿದ್ದಾರೆ.
ಪೃಥ್ವಿ ಶಾ ಬ್ಯಾಟಿಂಗ್ ಆರ್ಭಟ ಈ ಹಿಂದೆ 2018ರ ಟೂರ್ನಿಯಲ್ಲಿ ಮಯಾಂಕ್ ಅಗರವಾಲ್ 723 ರನ್ ಗಳಿಸಿದ್ದರು. ಆದರೆ ಇದೀಗ ವಿಜಯ್ ಹಜಾರೆ ಸೆಮಿಫೈನಲ್ವರೆಗೂ ಪೃಥ್ವಿ ಶಾ 754 ರನ್ ಗಳಿಸಿ ಆ ದಾಖಲೆ ಅಳಿಸಿ ಹಾಕಿದ್ದಾರೆ. ಇದರಲ್ಲಿ ನಾಲ್ಕು ಶತಕ ಸೇರಿಕೊಂಡಿವೆ.
ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿ; ಸೆಮೀಸ್ನಲ್ಲಿ ಕರ್ನಾಟಕ ಸೋಲು.. ಮುಂಬೈ-ಯುಪಿ ಫೈನಲ್ಗೆ
ವಿಜಯ್ ಹಜಾರೆಯಲ್ಲಿ ಅತಿ ಹೆಚ್ಚು ರನ್
- ಪೃಥ್ವಿ ಶಾ 7 ಪಂದ್ಯಗಳಿಂದ 754 ರನ್(2021)
- ಮಯಾಂಕ್ ಅಗರವಾಲ್ 8 ಪಂದ್ಯಗಳಿಂದ 723 ರನ್(2018)
- ದೇವದತ್ ಪಡಿಕ್ಕಲ್ 7 ಪಂದ್ಯಗಳಿಂದ 673 ರನ್(2021)
- ದೇವದತ್ ಪಡಿಕ್ಕಲ್ 11 ಪಂದ್ಯಗಳಿಂದ 609 ರನ್(2020)
- ದಿನೇಶ್ ಕಾರ್ತಿಕ್ 9 ಪಂದ್ಯಗಳಿಂದ 607 ರನ್(2017)
ಈಗಾಗಲೇ ಲಿಸ್ಟ್ ಎ ಪಂದ್ಯಗಳಲ್ಲಿ ಚೇಸಿಂಗ್ ವೇಳೆ ವೈಯಕ್ತಿ ಗರಿಷ್ಠ ರನ್ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪೃಥ್ವಿ ಶಾ ಭಾಜನರಾಗಿದ್ದು, ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 123 ಎಸೆತಗಳಲ್ಲಿ ಅಜೇಯ 185 ರನ್ ಗಳಿಸಿದ್ದರು. ಈ ಹಿಂದೆ 2005ರಲ್ಲಿ ಜೈಪುರದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಅಜೇಯ 183 ರನ್ ಗಳಿಸಿದ್ದರೆ, 2012ರಲ್ಲಿ ಢಾಕಾದಲ್ಲಿ ನಡೆದ ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 183 ರನ್ ಗಳಿಸಿದ್ದರು.