ಕರ್ನಾಟಕ

karnataka

ETV Bharat / sports

ಬಿಡ್ಡಿಂಗ್ ಇತಿಹಾಸದಲ್ಲೇ ಇವರು ಅತಿ ಹಿರಿಯ ಆಟಗಾರ: ಕೆಕೆಆರ್‌ ಬೆನ್ನು ತಟ್ಟಿದ ನೆಟ್ಟಿಗರು - ಪ್ರವೀಣ್​​ ತಾಂಬೆ

ಪ್ರಸಕ್ತ ಸಾಲಿನ ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಕ್ರಿಕೆಟ್‌ನ ಹರಾಜು ಪ್ರಕ್ರಿಯೆಯಲ್ಲಿ 48 ವರ್ಷದ ಆಟಗಾರ​​ ಕೆಕೆಆರ್​​ ತಂಡದ ಪಾಲಾಗಿದ್ದು, ಬಿಡ್ಡಿಂಗ್​​ ಇತಿಹಾಸದಲ್ಲೇ ಹಿರಿಯ ಆಟಗಾರ​ ಎನಿಸಿದ್ದಾರೆ.

Pravin Tambe
ಪ್ರವೀಣ್​ ತಾಂಬೆ

By

Published : Dec 20, 2019, 4:17 PM IST

ಕೋಲ್ಕತ್ತಾ:ಐಪಿಎಲ್‌ಹರಾಜು ಪ್ರಕ್ರಿಯೆಯಲ್ಲಿ ಎಲ್ಲ ಫ್ರಾಂಚೈಸಿಗಳು ಓಡುವ ಕುದುರೆಗಳಿಗೆ ಮಣೆ ಹಾಕಿವೆ. ತಾರಾ ಆಟಗಾರರು ಹಾಗು ಯುವ ಆಟಗಾರರನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡು 13ನೇ ಆವೃತ್ತಿ ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಟೂರ್ನಿಗೆ ಸಜ್ಜಾಗುತ್ತಿವೆ. ಈ ಮಧ್ಯೆ ಕೋಲ್ಕತ್ತಾ ನೈಟ್​ ರೈಡರ್ಸ್​​​ 48 ವರ್ಷದ ಆಟಗಾರನ​ನ್ನು ಖರೀದಿಸಿದ್ದು ನೆಟಿಜನ್ಸ್​​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗಲ್ಲ ಎಂಬುದು ಕ್ರಿಕೆಟಿಗ ಪ್ರವೀಣ್​ ತಾಂಬೆ ಮಾತು. ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ಪಡೆದುಕೊಳ್ಳಲು ವಿಫಲರಾದ್ರೂ ಇಂಡಿಯನ್​​ ಪ್ರೀಮಿಯರ್​ ಲೀಗ್​​​ನಲ್ಲಿ ಮಿಂಚಿ ಸದ್ದು ಮಾಡಿರುವ ಈ ಪ್ಲೇಯರ್​​​ 2014ರ ಟೂರ್ನಿಯಲ್ಲಿ ಹ್ಯಾಟ್ರಿಕ್​ ವಿಕೆಟ್​​ ಸಾಧನೆ ಮಾಡಿದ್ದರು. ಜತೆಗೆ ಈ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ಪ್ಲೇಯರ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

48 ವರ್ಷದ ಪ್ರವೀಣ್​ ತಾಂಬೆ ಈ ಸಲ ಕೋಲ್ಕತ್ತಾ ನೈಟ್​​ ರೈಡರ್ಸ್​​​ ತಂಡದಿಂದ ಮೂಲ ಬೆಲೆ 20 ಲಕ್ಷ ರೂಗೆ ಬಿಕರಿಯಾಗಿದ್ದಾರೆ. ಈ ಮೂಲಕ ಹಿಂದೆ ಬಿಕರಿಯಾಗಿದ್ದ 44ರ ಹರೆಯದ ಆಸ್ಟ್ರೇಲಿಯಾದ ಸ್ಪಿನ್ನರ್​​​ ಬ್ರಾಡ್​​ ಹಾಡ್ಜ್​​ ದಾಖಲೆ ಪುಡಿಗಟ್ಟಿದ್ದಾರೆ. ಇವರು ಕೆಕೆಆರ್​​ ತಂಡ ಸೇರಿಕೊಳ್ತಿದ್ದಂತೆ ನೆಟ್ಟಿಗರು​​​ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗುಡ್​​​ ಲಕ್​​ ಸರ್​​ಜೀ ಎಂದು ಶುಭಾಶಯ ಕೋರಿದ್ದಾರೆ.

ಐಪಿಎಲ್​​​ನಲ್ಲಿ 33 ಪಂದ್ಯವಾಡಿ 28 ವಿಕೆಟ್​ ಕಬಳಿಸಿರುವ ಈ ಆಟಗಾರ​​​ ಟಿ-20 ಮುಂಬೈ ಲೀಗ್​​​​ ಹಾಗೂ ಟಿ10 ಅಬುದಾಬಿ ಲೀಗ್​​ನಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details