ಟ್ರಿನಿಡಾಡ್: ಭಾರತದ 48 ವರ್ಷದ ಹಿರಿಯ ಸ್ಪಿನ್ನರ್ ಪ್ರವೀಣ್ ತಾಂಬೆ ಇಂದು ಟ್ರಿಂಬ್ಯಾಗೊ ನೈಟ್ ರೈಡರ್ಸ್ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದು, ಸಿಪಿಎಲ್‌ನಲ್ಲಿ ಆಡುತ್ತಿರುವ ಭಾರತದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಅನುಭವಿ ಸ್ಪಿನ್ನರ್ ಪ್ರವೀಣ್ ತಾಂಬೆಯವರನ್ನು 5.6 ಲಕ್ಷ ರೂ.ಗಳಿಗೆ ಶಾರೂಖ್ ಖಾನ್ ಮಾಲೀಕತ್ವದ ಟ್ರಿಂಬ್ಯಾಗೊ ನೈಟ್ ರೈಡರ್ಸ್ ತಂಡ ಖರೀದಿಸಿದೆ. ಇಂದಿನ ಪಂದ್ಯದಲ್ಲಿ ತಾಂಬೆ ಸೇಂಟ್ ಲೂಸಿಯಾ ಜೌಕ್ಸ್ ತಂಡದ ವಿರುದ್ಧ ಕಣಕ್ಕಿಳಿಯಲಿದ್ದಾರೆ.
2020ರ ಐಪಿಎಲ್ ಹರಾಜಿನಲ್ಲಿ ಪ್ರವೀಣ್ ತಾಂಬೆ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 20 ಲಕ್ಷ ರೂ.ಗಳಿಗೆ ಖರೀದಿಸಿತ್ತು. ಬಿಸಿಸಿಐನಿಂದ ಎನ್ಒಸಿ ಪಡೆಯದೆ ಅಬುದಾಬಿ ಟಿ10 ಲೀಗ್ನಲ್ಲಿ ಆಡಿದ್ದರಿಂದ ಅವರನ್ನು 2020ರ ಐಪಿಎಲ್ನಿಂದ ಅನರ್ಹಗೊಳಿಸಿಲಾಗಿತ್ತು. ಟಿಎನ್‌ಆರ್ ಹಾಗೂ ಕೆಕೆಆರ್ ಎರಡೂ ತಂಡಗಳ ಮಾಲೀಕ ಬಾಲಿವುಡ್ ಸ್ಟಾರ್ ನಟ ಶಾರೂಖ್ ಖಾನ್ ಆಗಿದ್ದರಿಂದ ತಾಂಬೆ ಸಿಪಿಎಲ್‌ನಲ್ಲಿ ಆಡುವ ಅವಕಾಸ ನೀಡಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಆಡಿದ್ದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವಕ್ಕೆ ಮುಂಬೈ ಸ್ಪಿನ್ನರ್ ಭಾಜನರಾಗಿದ್ದರು. ಪ್ರವೀಣ್ ತಾಂಬೆ 41ನೇ ವಯಸ್ಸಿನಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದರು. 33 ಐಪಿಎಲ್ ಪಂದ್ಯಗಳಲ್ಲಿ 28 ವಿಕೆಟ್‌ಗಳನ್ನು ಪಡೆದಿದ್ದಾರೆ