ಪುಣೆ: ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪರವಾಗಿ ಕಣಕ್ಕಿಳಿದ ಕನ್ನಡಗಿ ಪ್ರಸಿದ್ಧ್ ಕೃಷ್ಣ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಭಾರತೀಯ ಬೌಲರ್ಗಳ ಪೈಕಿ ನೂತನ ರೆಕಾರ್ಡ್ ನಿರ್ಮಾಣಗೊಂಡಿದೆ.
ಟೀಂ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ 16 ಬೌಲರ್ಸ್ಗಳು 3ವಿಕೆಟ್ ಪಡೆದುಕೊಂಡಿದ್ದು, ಇದರಲ್ಲಿ ಆಫ್ ಸ್ಪಿನ್ನರ್ ನೋಯೆಲ್ ಡೇವಿಡ್ 1997ರಲ್ಲಿ 21ರನ್ಗಳಿಗೆ 3 ವಿಕೆಟ್ ಪಡೆದು ಅದ್ಭುತ ರೆಕಾರ್ಡ್ ಹೊಂದಿದ್ದಾರೆ. ಆದರೆ ಇದೀಗ ಪ್ರಸಿದ್ಧ್ ಕೃಷ್ಣ 8.1 ಓವರ್ಗಳಲ್ಲಿ 54ರನ್ ನೀಡಿ 4ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿರುವ ಮೊದಲ ಭಾರತೀಯ ಪ್ಲೇಯರ್ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.