ಮುಂಬೈ:ಭಾರತೀಯ ಆಯ್ಕೆ ಸಮಿತಿಯ ಎರಡು ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳಲ್ಲಿ ಇದೀಗ ಮೂವರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದ್ದು, ಇದರಲ್ಲಿ ಇಬ್ಬರಿಗೆ ಸ್ಥಾನ ಸಿಗಲಿದ್ದು, ಕನ್ನಡಿಗರಾದ ಸುನಿಲ್ ಜೋಶಿ ಹಾಗೂ ವೆಂಕಟೇಶ್ ಪ್ರಸಾದ್ಗೆ ಕ್ರಿಕೆಟ್ ಆಯ್ಕೆ ಸಮಿತಿಯಲ್ಲಿ ಅವಕಾಶ ನೀಡುವುದು ಬಹುತೇಕ ಖಚಿತ ಎಂಬ ಮಾತು ಕೇಳಿ ಬರುತ್ತಿವೆ.
ಬಿಸಿಸಿಐ ಆಯ್ಕೆ ಸಮಿತಿ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಅಜಿತ್ ಅಗರ್ಕರ್, ಸುನಿಲ್ ಜೋಶಿ, ವೆಂಕಟೇಶ್ ಪ್ರಸಾದ್, ಚೇತನ್ ಶರ್ಮಾ, ನಯನ್ ಮೊಂಗಿಯಾ, ಎಲ್ ಶಿವರಾಮಕೃಷ್ಣನ್, ರಾಜೇಶ್ ಚೌಹಾಣ್, ಗ್ಯಾನೇಂದ್ರ ಪಾಂಡೆ, ಪ್ರೀತಮ್ ಗಂಧೆ ನಡುವೆ ನೇರ ಪೈಪೋಟಿ ಉಂಟಾಗಿತ್ತು. ಆದರೆ, ಇದೀಗ ಕ್ರಿಕಟ್ ಸಲಹಾ ಸಮಿತಿ ಮೂವರು ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದೆ. ನಿನ್ನೆ ಸಭೆ ನಡೆಸಿದ ಮದನ್ ಲಾಲ್, ಆರ್ಪಿ ಸಿಂಗ್ ಹಾಗೂ ಸುಲಕ್ಷನ್ ನಾಯ್ಕ್ ಮೂವರು ಹೆಸರು ಅಂತಿಮ ಗೊಳಿಸಿದ್ದಾರೆ.