ಸೇಂಟ್ ಜಾನ್ಸ್:ನ್ಯೂಜಿಲೆಂಡ್ ವಿರುದ್ಧದ ಟಿ-20 ಮತ್ತು ಟೆಸ್ಟ್ ಸರಣಿಗೆ ನಿಕೊಲಸ್ ಪೂರನ್ ಮತ್ತು ರೋಸ್ಟನ್ ಚೇಸ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಪ್ರಕಟಿಸಿದೆ.
ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೀನ್ ಪೊಲಾರ್ಡ್ ತಂಡವನ್ನು ಮುನ್ನಡೆಸಿದರೆ, ಜೇಸನ್ ಹೋಲ್ಡರ್ ಎರಡು ಟೆಸ್ಟ್ ಪಂದ್ಯಗಳಲ್ಲಿ ನಾಯಕನ ಕರ್ತವ್ಯ ನಿರ್ವಹಿಸಲಿದ್ದಾರೆ.
"ನ್ಯೂಜಿಲೆಂಡ್ ಪ್ರವಾಸಕ್ಕಾಗಿ ರೋಸ್ಟನ್ ಚೇಸ್ ಅವರನ್ನು ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ. ಅವರು ಒಬ್ಬ ಅನುಭವಿ ಆಟಗಾರನಾಗಿದ್ದು, ಸಹ ಆಟಗಾರರಿಗೆ ಸಲಹೆ ನೀಡಲು ಮತ್ತು ಚರ್ಚಿಸಲು ಸಿದ್ಧರಿದ್ದಾರೆ. ಸಹ ಆಟಗಾರರು ಮತ್ತು ತರಬೇತುದಾರರೊಂದಿಗಿನ ವಿಚಾರಗಳು, ಮೈದಾನದಲ್ಲಿ ಮತ್ತು ಹೊರಗೆ ನಾಯಕ ಜೇಸನ್ ಹೋಲ್ಡರ್‌ಗೆ ಉತ್ತಮ ನಾಯಕತ್ವದ ಬೆಂಬಲವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ನ ಪ್ರಮುಖ ಆಯ್ಕೆದಾರ ರೋಜರ್ ಹಾರ್ಪರ್ ಹೇಳಿದರು.