ಕರ್ನಾಟಕ

karnataka

ETV Bharat / sports

ದೀಪಕ್​ ದಾಳಿಗೆ ತತ್ತರಿಸಿದ್ದ ವಿಂಡೀಸ್​ಗೆ ಪೊಲಾರ್ಡ್​ ಆಸರೆ.. ಭಾರತಕ್ಕೆ 147 ರನ್​ಗಳ ಟಾರ್ಗೆಟ್​ - ಭಾರತಕ್ಕೆ​ 147 ರನ್​ಗಳ ಟಾರ್ಗೆಟ್​

ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ವಿಂಡೀಸ್​ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 146 ರನ್​ಗಳಿಸಿದೆ.

West Indies

By

Published : Aug 6, 2019, 11:01 PM IST

Updated : Aug 6, 2019, 11:09 PM IST

ಗಯಾನ:ಭಾರತ- ವೆಸ್ಟ್​ ಇಂಡೀಸ್​ ನಡುವಿನ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ವಿಂಡೀಸ್​ 146 ರನ್​ಗಳಿಸಿದೆ.

ಟಾಸ್​ ಗೆದ್ದ ಭಾರತ ತಂಡದ ನಾಯಕ ಕೊಹ್ಲಿ ವಿಂಡೀಸ್​ ತಂಡಕ್ಕೆ ಬ್ಯಾಟಿಂಗ್​ ಆಹ್ವಾನವಿತ್ತರು. ವಿಂಡೀಸ್​ ಪರ ಬ್ಯಾಟಿಂಗ್​ ಇಳಿದ ನರೈನ್(2)​, ಲೆವಿಸ್​(10) ಹಾಗೂ ಶಿಮ್ರಾನ್ ಹೆಟ್ಮೈರ್​ರನ್ನು ದೀಪಕ್​ ಚಹಾರ್​ ಪವರ್​ ಪ್ಲೇ ಒಳಗೆ ಪೆವಿಲಿಯನ್​ ಸೇರಿಸಿದರು.

ಈ ಹಂತದಲ್ಲಿ ಜೊತೆಯಾದ ಪೊಲಾರ್ಡ್​ ಹಾಗೂ ಪೂರನ್ 66 ರನ್​ ಜೊತೆಯಾಟ ನೀಡಿದರು. ​17 ರನ್​ಗಳಿಸಿದ್ದ ಪೂರನ್​ ಹಾಗೂ 58 ರನ್​ಗಳಿಸಿದ್ದ ಕೀರನ್​ ಪೊಲಾರ್ಡ್​ ಸೈನಿಗೆ ವಿಕೆಟ್​ ಒಪ್ಪಿಸಿದ್ದರು. ಪೊಲಾರ್ಡ್​ 45 ಎಸೆತಗಳಲ್ಲಿ 6 ಸಿಕ್ಸರ್​ ಹಾಗೂ ಒಂದು ಬೌಂಡರಿ ಸಿಡಿಸಿದರು. ಇವರಿಬ್ಬರ ನಂತರ ಅಬ್ಬರಿಸಿದ ಪೊವೆಲ್​20 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 1 ಬೌಂಡರಿ ಸಹಿತ 32 ರನ್​ಗಳಿಸಿ ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದ ತಂಡವನ್ನು ಸ್ಪರ್ಧಾತ್ಮಕ ಮೊತ್ತ ದಾಖಲಿಸುವಂತೆ ಮಾಡಿದರು. ಬ್ರಾತ್​ವೇಟ್​ 10, ಅಲೆನ್​ 8 ರನ್​ಗಳಸಿದರು.

ಸರಣಿಯಲ್ಲಿ ಮೊದಲ ಪಂದ್ಯವಾಡಿದ ದೀಪಕ್​ ಚಹಾರ್​ 4 ರನ್​ ನೀಡಿ 3 ವಿಕೆಟ್​ ಪಡೆದರು. ಸೈನಿ 2 ವಿಕೆಟ್​ ಹಾಗೂ ಇಂದೇ ಪದಾರ್ಪಣೆ ಮಾಡಿದ ರಾಹುಲ್​ ಚಹಾರ್​ ಒಂದು ವಿಕೆಟ್​ ಪಡೆದರು.

Last Updated : Aug 6, 2019, 11:09 PM IST

ABOUT THE AUTHOR

...view details