ಕರ್ನಾಟಕ

karnataka

By

Published : Oct 17, 2019, 4:03 PM IST

ETV Bharat / sports

ಭಾರತ - ಬಾಂಗ್ಲಾ ಟೆಸ್ಟ್​ ಕ್ರಿಕೆಟ್​ ಪಂದ್ಯ: ಮೋದಿ - ಶೇಖ್​​​ ಹಸೀನಾರನ್ನು ಆಹ್ವಾನಿಸಿದ ಸಿಎಬಿ

ನವೆಂಬರ್​ 22 ರಂದು ಭಾರತ ಹಾಗೂ ಬಾಂಗ್ಲಾದೇಶಗಳ ನಡುವೆ ಈಡನ್​ ಗಾರ್ಡನ್​ನಲ್ಲಿ ನಡೆಯುವ ಟೆಸ್ಟ್​ ಪಂದ್ಯಕ್ಕೆ  ಬೆಂಗಾಲ್ ಕ್ರಿಕೆಟ್​ ಅಸೋಸಿಯೇಷನ್​​ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್​​​ ಹಸೀನಾ ಅವರಿಗೆ ಅಹ್ವಾನ ನೀಡಿದೆ.

Eden Gardens Test

ನವದೆಹಲಿ: ನವೆಂಬರ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆಯುವ ಟೆಸ್ಟ್​ ಪಂದ್ಯಕ್ಕೆ ಎರಡೂ ದೇಶಗಳ ಪ್ರಧಾನಿಗಳಿಗೆ ಆಹ್ವಾನ ನೀಡಿದೆ.

ನವೆಂಬರ್​ 22 ರಂದು ಭಾರತ ಹಾಗೂ ಬಾಂಗ್ಲದೇಶಗಳ ನಡುವೆ ಈಡನ್ ​ಗಾರ್ಡನ್​ನಲ್ಲಿ ನಡೆಯುವ ಟೆಸ್ಟ್​ ಪಂದ್ಯಕ್ಕೆ ಬೆಂಗಾಲ್ ಕ್ರಿಕೆಟ್​ ಅಸೋಸಿಯೇಷನ್​​ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್​ ಹಸೀನಾ ಅವರಿಗೆ ಆಹ್ವಾನ ನೀಡಿದೆ.

ಬಾಂಗ್ಲಾದೇಶ ತಂಡ ಇದೇ ಮೊದಲ ಬಾರಿಗೆ ಈಡನ್​ ಗಾರ್ಡನ್​​ನಲ್ಲಿ ಟೆಸ್ಟ್​ ಕ್ರಿಕೆಟ್​ ಆಡುತ್ತಿರುವುದರಿಂದ ಈ ಐಸತಿಹಾಸಿಕ ಪಂದ್ಯದ ನೆನಪಿಗಾಗಿ ಎರಡೂ ದೇಶಗಳ ಪ್ರಧಾನಿಗಳಿಗೆ ಆಹ್ವಾನ ನೀಡಿ ಪತ್ರ ಬರೆಯಲಾಗಿದೆ ಎಂದು ಸಿಎಬಿ ತಿಳಿಸಿದೆ.

2016ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್​ ವೇಳೆಯಲ್ಲೂ ಸಿಎಬಿ ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​ ಅವರನ್ನು ಅಹ್ವಾನಿಸಿತ್ತು. ಅದೇ ಪಂದ್ಯಕ್ಕೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಹಾಲಿ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಆಹ್ವಾನಿಸಿತ್ತು.

2011ರ ವಿಶ್ವಕಪ್​ನಲ್ಲೂ ಅಂದಿನ ಭಾರತದ ಪ್ರಧಾನಿ ಮನಮೋಹನ್​ ಸಿಂಗ್ ಹಾಗೂ ಪಾಕಿಸ್ತಾನ ಪ್ರಧಾನಿ ಯೂಸಫ್​ ರಾಜಾ ಗಿಲಾನಿ ಸೇರಿದಂತೆ ಹಲವಾರು ಗಣ್ಯರು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಿದ್ದರು.

ABOUT THE AUTHOR

...view details