ಕರ್ನಾಟಕ

karnataka

ETV Bharat / sports

ನಿವೃತ್ತಿ ಹಿಂಪಡೆದು, 2021ರ ಟಿ-20 ವಿಶ್ವಕಪ್​ ಆಡುವಂತೆ ಧೋನಿಗೆ ಮೋದಿ ಮನವಿ ಮಾಡ್ಬಹುದು: ಅಖ್ತರ್​!

ಟೀಂ ಇಂಡಿಯಾ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದ ಮಹೇಂದ್ರ ಸಿಂಗ್​ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಇದೇ ವಿಷಯವಾಗಿ ಪಾಕ್ ಮಾಜಿ ಬೌಲರ್​ ಅಖ್ತರ್​ ಮಾತನಾಡಿದ್ದಾರೆ.

MS Dhoni
MS Dhoni

By

Published : Aug 19, 2020, 5:52 PM IST

ಲಾಹೋರ್​​​( ಪಾಕಿಸ್ತಾನ): ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​, ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಮಹೇಂದ್ರ ಸಿಂಗ್​ ಧೋನಿ ದಿಢೀರ್​ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್​ ಶೋಯೆಬ್​ ಅಖ್ತರ್​​, 2021ರ ವಿಶ್ವಕಪ್​ನಲ್ಲಿ ಆಡುವಂತೆ ಧೋನಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಬಹುದು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಶೋಯೆಬ್​ ಅಖ್ತರ್​

ಯೂಟ್ಯೂಬ್​ ಚಾನೆಲ್​​ನಲ್ಲಿ ಮಾತನಾಡಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್​ ಅಖ್ತರ್​, ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್​​ನಲ್ಲಿ ಅವರು ಭಾಗಿಯಾಗಬಹುದು. ಆದರೆ ಇದು ಅವರ ವೈಯಕ್ತಿಕ ವಿಚಾರವಾಗಿದೆ ಎಂದಿದ್ದಾರೆ.

ಏನು ಹೇಳಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ, 2021ರ ವಿಶ್ವಕಪ್​​ನಲ್ಲಿ ಆಡಲು ವಿನಂತಿ ಮಾಡಬಹುದು. ಈ ಹಿಂದೆ ಇಮ್ರಾನ್​ ಖಾನ್​ ಅವರನ್ನ ಜನರಲ್​ ಜಿಯಾ - ಉಲ್​- ಹಕ್​​ ಅವರು 1987ರಲ್ಲಿ ಕ್ರಿಕೆಟ್​ ನಿವೃತ್ತಿ ಪಡೆದುಕೊಳ್ಳದಂತೆ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ ಅವರು ದೇಶಕ್ಕಾಗಿ ಮತ್ತೆ ಆಡಿದರು ಎಂದಿದ್ದಾರೆ.

ನರೇಂದ್ರ ಮೋದಿ

ರಾಂಚಿಯಿಂದ ಬಂದ ವ್ಯಕ್ತಿಯೊಬ್ಬ ಈಗಾಗಲೇ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ. ಪ್ರಧಾನಮಂತ್ರಿ ಕೋರಿಕೆ ಮೇರೆಗೆ ಆವರು ಮತ್ತೊಮ್ಮೆ ಪುನರಾಗಮನ ಮಾಡಬಹುದು ಎಂದು ಅಖ್ತರ್​ ಹೇಳಿದ್ದಾರೆ.

39 ವರ್ಷದ ಮಹೇಂದ್ರ ಸಿಂಗ್​ ಧೋನಿ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, 350 ಏಕದಿನ, 90 ಟೆಸ್ಟ್​ ಹಾಗೂ 98 ಟಿ-20 ಪಂದ್ಯಗಳನ್ನಾಡಿದ್ದಾರೆ. ಇವರ ನಾಯಕತ್ವದಲ್ಲೇ ಟೀಂ ಇಂಡಿಯಾ ಐಸಿಸಿಯ ಎಲ್ಲ ಟ್ರೋಫಿ ಗೆದ್ದಿದೆ. ಈ ಸಾಧನೆ ಮಾಡಿರುವ ಏಕೈಕ ನಾಯಕ ಎಂಬ ಖ್ಯಾತಿ ಕೂಡ ಅವರು ಗಳಿಸಿದ್ದಾರೆ.

ಧೋನಿ ನಾಯಕತ್ವದಲ್ಲಿ ಭಾರತ 2007 ಟಿ - 20 ವಿಶ್ವಕಪ್, 2010 ಮತ್ತು 2016 ಏಷ್ಯಾ ಕಪ್, 2011 ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.

ಕಳೆದ ಜುಲೈ ತಿಂಗಳಲ್ಲಿ ನಡೆದ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಮಹೇಂದ್ರ ಸಿಂಗ್​ ಧೋನಿ ಟೀಂ ಇಂಡಿಯಾ ಪರ ಕೊನೆಯದಾಗಿ ಆಡಿದ್ದರು. ಸದ್ಯ ದುಬೈನಲ್ಲಿ ನಡೆಯಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೋಸ್ಕರ ಅವರು ಅಭ್ಯಾಸ ಆರಂಭಿಸಿದ್ದಾರೆ.

ABOUT THE AUTHOR

...view details