ಕರ್ನಾಟಕ

karnataka

ETV Bharat / sports

ದಯವಿಟ್ಟು, ರಿಷಭ್​ ಪಂತ್​​ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ: ರೋಹಿತ್ ಶರ್ಮಾ ಮನವಿ - ಟೀಂ ಇಂಡಿಯಾ ವಿಕೆಟ್​ ಕೀಪರ್​

ವಿಕೆಟ್​ ಕೀಪಿಂಗ್​ ವೇಳೆ ರಿಷಭ್​ ಪಂತ್​ ಮೇಲಿಂದ ಮೇಲೆ ತಪ್ಪು ಮಾಡುತ್ತಿದ್ದು ಮೊನ್ನೆ ನಡೆದ ಎರಡನೇ ಟಿ20 ಪಂದ್ಯದಲ್ಲೂ ಅವರಲ್ಲಿ​ ವೈಫಲ್ಯ ಕಾಣಿಸಿಕೊಂಡಿದೆ.

ರಿಷಭ್​ ಪಂತ್​

By

Published : Nov 9, 2019, 4:03 PM IST

ರಾಜ್​ಕೋಟ್​​:ಬಾಂಗ್ಲಾ ವಿರುದ್ಧ ರಾಜ್​​ಕೋಟ್​​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲೂ ರಿಷಭ್‌ ಪಂತ್‌ ವಿಕೆಟ್​ ಕೀಪಿಂಗ್‌ ಯಡವಟ್ಟುಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅವರ ಪರವಾಗಿ ರೋಹಿತ್ ಶರ್ಮಾ ಬ್ಯಾಟ್​ ಬೀಸಿದ್ದಾರೆ.

ಲೆಗ್​ ಸ್ಪಿನ್ನರ್​ ಯಜುವೇಂದ್ರ ಚಹಾಲ್​ ಬೌಲಿಂಗ್​ ಮಾಡುತ್ತಿದ್ದ ವೇಳೆ ಚೆಂಡು ಸ್ಟಂಪ್‌ ದಾಟೋದಕ್ಕೂ ಮುನ್ನ ಸ್ಟಂಪ್​ ಔಟ್ ಮಾಡುವ ಮೂಲಕ ಪಂತ್ ಆತುರ ತೋರಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅನೇಕರು ಟೀಕಾಪ್ರಹಾರವನ್ನೇ ನಡೆಸಿದ್ದರು.

ಚೆಂಡು ಸ್ಟಂಪ್‌ ದಾಟೋದಕ್ಕೂ ಮುನ್ನ ರಿಷಭ್‌ ಪಂತ್‌ ಆತುರ! ಯಡವಟ್ಟಿಗೆ ಕ್ಯಾಪ್ಟನ್‌ ಬೇಸರ! ವಿಡಿಯೋ

ಈ ಬಗ್ಗೆ​ ಮಾತನಾಡಿರುವ ರೋಹಿತ್​​, ದಯವಿಟ್ಟು ಪಂತ್ ಅವರನ್ನು ಏಕಾಂಗಿಯಾಗಿ ಬಿಟ್ಟುಬಿಡಿ. ನನಗೆ ಅನ್ನಿಸಿರುವ ಪ್ರಕಾರ ನೀವೆಲ್ಲರೂ ಅವನ ಬಗ್ಗೆ ಚಿಂತೆ ಮಾಡುವ ಬದಲು ಸುಮ್ಮನಿರುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್​ ಕೀಪಿಂಗ್​ ಮಾಡುತ್ತಿರುವ ರಿಷಭ್​ ಪಂತ್​ ಮೈದಾನದಲ್ಲಿ ತಪ್ಪುಗಳನ್ನು ಎಸಗುತ್ತಿದ್ದಾರೆ. ಇದು ತಂಡಕ್ಕೆ ತಲೆನೋವಾಗಿರೋದು ನಿಜ. ಆದರೆ ಆತ ಓರ್ವ ಪರಿಪೂರ್ಣ ವಿಕೆಟ್​ ಕೀಪರ್​ ಆಗಿ ನಿರ್ಮಾಣಗೊಳ್ಳಬೇಕಾದರೆ ಅವರಿಗೆ ಹೆಚ್ಚಿನ ಸಮಯವಕಾಶದ ಅವಶ್ಯಕತೆ ಇದೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.

ABOUT THE AUTHOR

...view details