ಕರ್ನಾಟಕ

karnataka

ETV Bharat / sports

ಪೆರ್ರಿಗೆ ಐಸಿಸಿ ಮಹಿಳಾ ಕ್ರಿಕೆಟರ್​​​​ ಪ್ರಶಸ್ತಿ... ಟಿ-20-ಏಕದಿನ ತಂಡಗಳಿಗೆ ಮಂಧಾನ ಆಯ್ಕೆ

ಪೆರ್ರಿ ಪ್ರತಿ ವರ್ಷ ರಾಚೆಲ್ ಹೆಹೋ ಫ್ಲಿಂಟ್ ಹೆಸರಿನಲ್ಲಿ ನೀಡುವ ಈ ವರ್ಷದ ಐಸಿಸಿ ಮಹಿಳಾ ಕ್ರಿಕೆಟರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಮೂರು ಮಾದರಿಯಲ್ಲೂ ಅತ್ಯುತ್ತಮ ಆಲ್​ರೌಂಡರ್ ಪ್ರದರ್ಶನ ತೋರಿರುವ ಪೆರ್ರಿ ಆ್ಯಶಸ್​ ಸರಣಿಯಲ್ಲಿ ಅದ್ಭುತ ಶತಕ ಸಿಡಿಸಿ ಮಿಂಚಿದ್ದರು. ಈ ಪ್ರದರ್ಶನವೇ ಅವರಿಗೆ ಐಸಿಸಿಯ ಪ್ರತಿಷ್ಠಿತ ಪ್ರಶಸ್ತಿ ತಂದುಕೊಟ್ಟಿದೆ.

Perry wins big at ICC Awards
Perry wins big atPerry wins big at ICC Awards ICC Awards

By

Published : Dec 17, 2019, 2:12 PM IST

Updated : Dec 17, 2019, 9:22 PM IST

ಲಂಡನ್​:ಆಸ್ಟ್ರೇಲಿಯಾದ ಮಹಿಳಾ ತಂಡದ ಸ್ಟಾರ್​ ಆಟಗಾರ್ತಿ ಎಲಿಸ್​ ಪೆರ್ರಿ ಈ ವರ್ಷದ ಐಸಿಸಿ ಮಹಿಳಾ ಕ್ರಿಕೆಟರ್​​ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೆರ್ರಿ ಪ್ರತಿ ವರ್ಷ ರಾಚೆಲ್ ಹೆಹೋ ಫ್ಲಿಂಟ್ ಹೆಸರಿನಲ್ಲಿ ನೀಡುವ ಈ ವರ್ಷದ ಐಸಿಸಿ ಮಹಿಳಾ ಕ್ರಿಕೆಟರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಮೂರು ಮಾದರಿಯಲ್ಲೂ ಅತ್ಯುತ್ತಮ ಆಲ್​ರೌಂಡರ್ ಪ್ರದರ್ಶನ ತೋರಿರುವ ಪೆರ್ರಿ ಆ್ಯಶಸ್​ ಸರಣಿಯಲ್ಲಿ ಅದ್ಭುತ ಶತಕ ಸಿಡಿಸಿ ಮಿಂಚಿದ್ದರು. ಈ ಪ್ರದರ್ಶನವೇ ಅವರಿಗೆ ಐಸಿಸಿಯ ಪ್ರತಿಷ್ಠಿತ ಪ್ರಶಸ್ತಿ ತಂದುಕೊಟ್ಟಿದೆ.

ಇನ್ನು 'ವರ್ಷದ ಏಕದಿನ ಮಹಿಳಾ ಕ್ರಿಕೆಟರ್​' ಪ್ರಶಸ್ತಿ ಕೂಡ ಪೆರ್ರಿ ಪಾಲಾಗಿದೆ. ಪೆರ್ರಿ 2019ರಲ್ಲಿ 73.50 ಸರಾಸರಿಯಲ್ಲಿ 441 ರನ್​ ಹಾಗೂ 21 ವಿಕೆಟ್ ಪಡೆದಿರುವುದೇ ಅವರಿಗೆ ಈ ಪ್ರಶಸ್ತಿ ಸಿಗಲು ಕಾರಣವಾಗಿದೆ.

ಐಸಿಸಿ ವರ್ಷದ ಟಿ-20 ಆಟಗಾರ್ತಿ ಪ್ರಶಸ್ತಿ ಕೂಡ ಆಸ್ಟ್ರೇಲಿಯಾದ ಪಾಲಾಗಿದೆ. ಆಸ್ಟ್ರೇಲಿಯಾ ವಿಕೆಟ್​ ಕೀಪರ್,​ ಬ್ಯಾಟ್ಸ್​ಮನ್​ ಅಲಿಸ್ಸಾ ಹೆಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಯನ್ನು ಥಾಯ್ಲೆಂಡ್​ ತಂಡದ 26 ವರ್ಷದ ಚನಿಡಾ ಸತ್ತಿರುವಾಂಗ್​ ಪಡೆದುಕೊಂಡಿದ್ದಾರೆ.

ಐಸಿಸಿ ಪ್ರಕಟಿಸಿದ ವರ್ಷದ ಏಕದಿನ ತಂಡದಲ್ಲಿ ಭಾರತದ ಸ್ಮೃತಿ ಮಂಧಾನ, ಶಿಖಾ ಪಾಂಡೆ, ಜುಲನ್ ಗೋಸ್ವಾಮಿ, ಪೂನಮ್​ ಯಾದವ್​ ಸ್ಥಾನ ಪಡೆದುಕೊಂಡಿದ್ದಾರೆ. ಈ ತಂಡಕ್ಕೆ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್​ ಲ್ಯಾನ್ನಿಂಗ್​ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಐಸಿಸಿ ವರ್ಷದ ಟಿ-20 ತಂಡದಲ್ಲಿ ಸ್ಮೃತಿ ಮಂಧಾನ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇವರ ಜೊತೆಗೆ ಆಲ್​ರೌಂಡರ್​ ದೀಪ್ತಿ ಶರ್ಮಾ ಹಾಗೂ ಸ್ಪಿನ್ನರ್​ ರಾಧಾ ಯಾದವ್​ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಟಿ-20 ತಂಡಕ್ಕೂ ಮೆಗ್​ ಲ್ಯಾನ್ನಿಂಗ್​ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Last Updated : Dec 17, 2019, 9:22 PM IST

For All Latest Updates

ABOUT THE AUTHOR

...view details