ಶ್ರೀನಗರ : ಲಡಾಖ್ ಘರ್ಷಣೆಯ ನಂತರ ದೇಶದಲ್ಲಿ ಚೈನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ನಡೆಯುತ್ತಿದ್ರೆ, ಇತ್ತ ಬಿಸಿಸಿಐ ಐಪಿಎಲ್ನಲ್ಲಿ ಚೀನಾದ ಪ್ರಾಯೋಜಕತ್ವವನ್ನು ಮುಂದುವರಿಸಿರುವುದಕ್ಕೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಚೀನಾ ವಸ್ತುಗಳನ್ನು ಬಹಿಷ್ಕರಿಸೋಣ ಎಂದು ಜನರಿಗೆ ಹೇಳುತ್ತಿದ್ರೆ, ಮತ್ತೊಂದು ಕಡೆ ಐಪಿಎಲ್ ಚೀನಾದ ಮೊಬೈಲ್ ಕಂಪನಿಯ ಪ್ರಾಯೋಜಕತ್ವವನ್ನು ಮುಂದುವರಿಸಲು ಬಯಸಿದೆ. ಚೀನಾವನ್ನು ನಿಯಂತ್ರಿಸುವುದು ಹೇಗೆ ಎಂಬ ಗೊಂದಲದ್ದಲ್ಲಿದ್ದೇವೆ. ಪರಿಸ್ಥಿರಿ ಹೀಗಿರುವಾಗ ಚೀನಾ ನಮ್ಮನ್ನು ಅಪಹಾಸ್ಯ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ" ಎಂದು ಓಮರ್ ಕಿಡಿಕಾರಿದ್ದಾರೆ.