ಕರ್ನಾಟಕ

karnataka

ETV Bharat / sports

ನ. 22ರಿಂದ ವುಮೆನ್ಸ್​ ಟಿ-20 ಚಾಂಪಿಯನ್​ಶಿಪ್ ಆರಂಭ - ಪಿಸಿಬಿ

3 ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಲಿವೆ. ಡಿಸೆಂಬರ್​ 1ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಟೂರ್ನಿಯ ಬಹುಮಾನ ಮೊತ್ತವನ್ನು ಶೇ. 100ರಷ್ಟು ಹೆಚ್ಚಿಸಲಾಗಿದೆ. ಚಾಂಪಿಯನ್ ತಂಡ ಒಂದು ಮಿಲಿಯನ್ ಪಿಕೆಆರ್​ ಮೊತ್ತವನ್ನು ಪಡೆದರೆ, ರನ್ನರ್ ಅಪ್​ 5,00,000 ಪಿಕೆಆರ್​ ಮೊತ್ತವನ್ನು ಪಡೆಯಲಿದೆ.

ವುಮೆನ್ಸ್​ ಟಿ20 ಚಾಂಪಿಯನ್​ಶಿಪ್
ವುಮೆನ್ಸ್​ ಟಿ20 ಚಾಂಪಿಯನ್​ಶಿಪ್

By

Published : Nov 21, 2020, 6:55 PM IST

ಲಾಹೋರ್​: ನವೆಂಬರ್ 22ರಿಂದ ಡಿಸೆಂಬರ್ 1ರವರೆಗೆ ರಾವಲ್ಪಿಂಡಿಯ ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ವುಮೆನ್ಸ್​ ಟಿ-20 ಚಾಂಪಿಯನ್​ಶಿಪ್​ ನಡೆಯಲಿದೆ. 1.7 ಮಿಲಿಯನ್ ಪಾಕಿಸ್ತಾನ ರೂಪಾಯಿ ಬಹುಮಾನವುಳ್ಳ ರಾಷ್ಟ್ರೀಯ ತ್ರಿಕೋನ ಟಿ-20 ಮಹಿಳಾ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ 42 ಮಹಿಳಾ ಕ್ರಿಕೆಟಿಗರು ಕಾರ್ಯಪ್ರವೃತ್ತರಾಗಲಿದ್ದಾರೆ.

ಮಹಿಳೆಯರ ಕ್ರಿಕೆಟ್​ಗೆ ಪ್ರೋತ್ಸಾಹ ಮತ್ತು ಅವರ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ನೀಡುವ ದೃಷ್ಟಿಯಲ್ಲಿ ಪಿಸಿಬಿ ಮೂರು ತಂಡಗಳ ಟೂರ್ನಿಗೆ ಚಾಲನೆ ನೀಡುತ್ತಿದೆ. 10 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಪಿಸಿಬಿ ಬ್ಲಾಸ್ಟರ್ಸ್​, ಪಿಸಿಬಿ ಚಾಂಲೆಂಜರ್ಸ್​ ಮತ್ತು ಪಿಸಿಬಿ ಡೈನಾಮೈಟ್ಸ್​ ತಂಡಗಳು ಸ್ಪರ್ಧಿಸಲಿವೆ.

3 ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಲಿವೆ. ಡಿಸೆಂಬರ್​ 1ರಂದು ಫೈನಲ್ ಪಂದ್ಯ ನಡೆಯಲಿದೆ. ಇನ್ನು ಈ ಬಾರಿ ಟೂರ್ನಿಯ ಬಹುಮಾನ ಮೊತ್ತವನ್ನು ಶೇ. 100ರಷ್ಟು ಹೆಚ್ಚಿಸಲಾಗಿದೆ. ಚಾಂಪಿಯನ್ ತಂಡ ಒಂದು ಮಿಲಿಯನ್ ಪಿಕೆಆರ್​ ಮೊತ್ತವನ್ನು ಪಡೆದರೆ, ರನ್ನರ್ ಅಪ್​ 5,00,000 ಪಿಕೆಆರ್​ ಮೊತ್ತವನ್ನು ಪಡೆಯಲಿದೆ.

ಸರಣಿ ಶ್ರೇಷ್ಠ ಪ್ರಶಸ್ತಿಗೆ 50,00 ಪಿಕೆಆರ್​, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ 20,000 ಪಿಕೆಆರ್​ ಮೊತ್ತವನ್ನು ನಿಗದಿ ಮಾಡಲಾಗಿದೆ.

ABOUT THE AUTHOR

...view details