ಕರ್ನಾಟಕ

karnataka

ETV Bharat / sports

16ನೇ ವಯಸ್ಸಿಗೆ ವಿಶ್ವದಾಖಲೆ: ಪಾಕ್​​ ಅಂಡರ್​ 19 ವಿಶ್ವಕಪ್​ನಿಂದ ಹೊರಬಿದ್ದ ನಸೀಮ್​ ಶಾ... ಕಾರಣ?

16 ವರ್ಷಕ್ಕೆ ಸೀನಿಯರ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿರುವ ನಸೀಮ್​ ಶಾರನ್ನು ಮತ್ತೆ ಜೂನಿಯರ್​ ಲೆವೆಲ್​ನಲ್ಲಿ ಆಡಿಸುವುದು ಬೇಡ ಎಂಬ ಕೂಗು ಕೇಳಿಬಂದ ಹಿನ್ನಲೆ ಪಿಸಿಬಿ ನಸೀಮ್​ ಶಾ ಹೆಸರನ್ನು ಅಂಡರ್​19 ತಂಡದಿಂದ ವಾಪಸ್​ ತೆಗೆದುಕೊಂಡಿದೆ. ಅವರ ಜಾಗಕ್ಕೆ ಜೂನಿಯರ್​ ಮೊಹಮ್ಮದ್ ವಾಸೀಮ್​ ಹೆಸರನ್ನು ಘೋಷಿಸಿದೆ.

Naseem Shah out from U-19 World Cup squad
Naseem Shah out from U-19 World Cup squad

By

Published : Jan 1, 2020, 12:46 PM IST

ಕರಾಚಿ:ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಪಾಕಿಸ್ತಾನದ ಕಿರಿಯ ಆಟಗಾರ ಎನಿಸಿಕೊಂಡಿರುವ ನಸೀಮ್​ ಶಾ ರನ್ನು ಅಂಡರ್​ 19 ತಂಡದಿಂದ ಹೊರಗಿಟ್ಟು ಅವರ ಜಾಗಕ್ಕೆ ಪಿಸಿಬಿ ಬದಲಿ ಆಟಗಾರನನ್ನು ಘೋಷಿಸಿದೆ.

16ನೇ ವಯಸ್ಸಿಗೇ ಸೀನಿಯರ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿರುವ ನಸೀಮ್​ ಶಾರನ್ನು ಮತ್ತೆ ಜೂನಿಯರ್​ ಲೆವೆಲ್​ನಲ್ಲಿ ಆಡಿಸುವುದು ಬೇಡ ಎಂಬ ಕೂಗು ಕೇಳಿಬಂದ ಹಿನ್ನಲೆ ಪಿಸಿಬಿ ನಸೀಮ್​ ಶಾ ಹೆಸರನ್ನು ಅಂಡರ್​19 ತಂಡದಿಂದ ವಾಪಸ್​ ತೆಗೆದುಕೊಂಡಿದ್ದು ಅವರ ಜಾಗಕ್ಕೆ ಜೂನಿಯರ್​ ಮೊಹಮ್ಮದ್ ವಾಸೀಮ್​ ಹೆಸರನ್ನು ಘೋಷಿಸಿದೆ.

ಅಂಡರ್​ 19 ಮುಖ್ಯ ಕೋಚ್ ಇಜಾಜ್ ಅಹ್ಮದ್​ ಅವರ ಸಲಹೆ ಮೇರೆಗೆ ನಸೀಮ್​ರನ್ನು ಜೂನಿಯರ್​ ವಿಶ್ವಕಪ್​ ತಂಡಕ್ಕೆ ಆಯ್ಕೆ ಮಾಡಿತ್ತು. ಆದರೆ ನಸೀಮ್ ಆಸ್ಟ್ರೇಲಿಯಾ​ ಹಾಗೂ ತವರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಉತ್ತಮ ಪ್ರದರ್ಶನ ತೋರಿದ ಮೇಲೆ ಅವರನ್ನು ಸೀನಿಯರ್​ ಲೆವೆಲ್​ ಕ್ರಿಕೆಟ್​ನಲ್ಲಿ ಮುಂದುವರಿಸಲು ಸೀನಿಯರ್​ ತಂಡದ ಕೋಚ್​ಗಳಾದ ಮಿಸ್ಬಾ ಉಲ್​ ಹಕ್​ ಹಾಗೂ ವಾಕರ್​ ಯೂನೀಸ್​ ನಿರ್ಧರಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ನಸೀಮ್​ ಶ್ರೀಲಂಕಾ ವಿರುದ್ಧ ಟೆಸ್ಟ್​ನಲ್ಲಿ 5 ವಿಕೆಟ್​ ಪಡೆಯುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ವೇಗದ ಬೌಲರ್​ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದರು. ಹೀಗಾಗಿ ಪಿಸಿಬಿ ಹೊಸ ಯುವ ಪ್ರತಿಭೆಗೆ ಅವಕಾಶ ಮಾಡಿಕೊಡುವ ನಿರ್ಧಾರ ತೆಗೆದುಕೊಂಡಿದೆ.

ಜನವರಿ 17ರಿಂದ ದಕ್ಷಿಣ ಆಫ್ರಿಕಾದಲ್ಲಿ ಜೂನಿಯರ್​ ವಿಶ್ವಕಪ್​ ನಡೆಯಲಿದೆ. ಪಾಕಿಸ್ತಾನ 2004 ಹಾಗೂ 2006ರಲ್ಲಿ ಅಂಡರ್​ 19 ವಿಶ್ವಕಪ್​ ಜಯಿಸಿತ್ತು.

ABOUT THE AUTHOR

...view details