ಲಾಹೋರ್:ಕಳೆದ ಮಾರ್ಚ್ನಲ್ಲಿ ಕೊರೊನಾ ಭೀತಿಯಿಂದ ಸ್ಥಗಿತಗೊಂಡಿದ್ದ ಪಾಕಿಸ್ತಾನ್ ಪ್ರೀಮಿಯರ್ ಲೀಗ್ ಅನ್ನು ನವೆಂಬರ್ನಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಬಿಸಿಸಿಐ ಮನವಿ ತಿರಸ್ಕರಿಸಿದ ಪಾಕ್: ನವೆಂಬರ್ನಲ್ಲೆ ಪಿಎಸ್ಎಲ್ ಪುನರಾರಂಭ ನಿರ್ಧಾರ - ಐಪಿಎಲ್ 2020
ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ವಿಚಾರವಾಗಿ ಐಸಿಸಿಯ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದರೆ, ಅತ್ತ ಪಾಕ್ ಕ್ರಿಕೆಟ್ ಮಂಡಳಿ ಬಿಸಿಸಿಐ ಮನವಿ ತಿರಸ್ಕರಿಸಿದೆ.
ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಅನ್ನು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಪಿಸಿಬಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವಂತೆ ಮನವಿ ಮಾಡಿಕೊಂಡಿತ್ತು. ಪಿಎಸ್ಎಲ್ನಲ್ಲೂ ಐಪಿಎಲ್ನಲ್ಲಿ ಆಡುವ ಬಹುತೇಕ ಆಟಗಾರರೋದು ಇದಕ್ಕೆ ಕಾರಣ. ಕ್ರಿಸ್ ಲಿನ್, ಆ್ಯಂಡ್ರೆ ರಸೆಲ್, ಕ್ರಿಸ್ ಗೇಲ್, ಲೆವಿಸ್, ಜಾಸನ್ ರಾಯ್ ಅವರಂತಹ ಆಟಗಾರರು ಎರಡೂ ಲೀಗ್ಗಳಲ್ಲೂ ಇರುವ ಕಾರಣ ಬಿಸಿಸಿಐ ಈ ಮನವಿ ಮಾಡಿತ್ತು.
ಆದರೆ ಬಿಸಿಸಿಐ ಮನವಿಯನ್ನು ತಳ್ಳಿ ಹಾಕಿರುವ ಪಿಸಿಬಿ ನೆವೆಂಬರ್ನಲ್ಲಿ ಟೂರ್ನಿ ನಡೆಸಲು ನಿರ್ಧರಿಸಿದೆ ಎಂದು ಪಾಕಿಸ್ತಾನದ ನ್ಯೂಸ್ ವೆಬ್ ಸೈಟ್ ಡೈಲಿ ಟೈಮ್ಸ್ ವರದಿ ಮಾಡಿದೆ. ಪಿಎಸ್ಎಲ್ ಲೀಗ್ ಬಹುತೇಕ ಅಂತಿಮ ಘಟ್ಟಕ್ಕೆ ಬಂದಿದ್ದು, ಕೇವಲ ನಾಲ್ಕು ಲೀಗ್ ಹಾಗೂ ನಾಕೌಟ್ ಪಂದ್ಯಗಳು ಮಾತ್ರ ಬಾಕಿಯಿದೆ. ನವೆಂಬರ್ನಲ್ಲಿ ಕೊರೊನಾ ಸ್ಥಿತಿಗತಿ ಗಮನಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.