ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ಪ್ರವಾಸಕ್ಕೂ ಮೊದಲು ಪತ್ನಿ ಭೇಟಿಗಾಗಿ ಭಾರತಕ್ಕೆ ಬರಲಿದ್ದಾರೆ ಮಲಿಕ್​! - ಪಾಕ್​ ಕ್ರಿಕೆಟ್​ ತಂಡ

ಇಂಗ್ಲೆಂಡ್​ ವಿರುದ್ಧದ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಲು ಪಾಕ್​ ತಂಡ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ಪಾಕ್​ ಕ್ರಿಕೆಟರ್​ ಶೋಯೆಬ್​ ಮಲಿಕ್​ ಭಾರತಕ್ಕೆ ಆಗಮಿಸಲಿದ್ದಾರೆ.

Shoaib Malik
Shoaib Malik

By

Published : Jun 20, 2020, 7:46 PM IST

ಲಾಹೋರ್​: ಇಂಗ್ಲೆಂಡ್​ ವಿರುದ್ಧದ ಕ್ರಿಕೆಟ್​ ಸರಣಿಗಾಗಿ ಪಾಕ್​ ಕ್ರಿಕೆಟ್ ತಂಡ ಜುಲೈ 24ರಂದು ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ತಂಡದ ಆಲ್​ರೌಂಡರ್​ ಶೋಯೆಬ್​ ಮಲಿಕ್​ ಭಾರತಕ್ಕೆ ಭೇಟಿ ನೀಡಿ, ಪತ್ನಿ-ಮಗನ ಜತೆ ಸಮಯ ಕಳೆಯಲಿದ್ದಾರೆ.

ಶೋಯೆಬ್​ ಮಲಿಕ್,​ ಸಾನಿಯಾ ಮಿರ್ಜಾ ಹಾಗೂ ಒಂದು ವರ್ಷದ ಮಗ ಇಜಾನ್​ ಕೊರೊನಾ ಲಾಕ್​ಡೌನ್​ನಿಂದಾಗಿ ಭಾರತದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಬೇರೆ ಯಾವುದೇ ದೇಶಕ್ಕೆ ಪ್ರವಾಸ ಕೈಗೊಳ್ಳಲು ಅವಕಾಶ ನೀಡಿಲ್ಲ. ಆದರೆ ಇದೀಗ ಲಾಕ್​ಡೌನ್​ ಸಡಿಲಿಕೆ ಆಗಿರುವ ಕಾರಣ ಕ್ರಿಕೆಟರ್​ ಭಾರತಕ್ಕೆ ಬರುವುದು ಕನ್ಫರ್ಮ್​ ಆಗಿದೆ.

ಶೋಯೆಬ್​ ಮಲಿಕ್​ ಕುಟುಂಬ

ಕಳೆದ ಐದು ತಿಂಗಳಿಂದಲೂ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಶೋಯೆಬ್​ ಪಾಕ್​ನಲ್ಲಿ ಉಳಿದುಕೊಂಡಿದ್ದು, ಸಾನಿಯಾ ಹಾಗೂ ಮಗು ಹೈದರಾಬಾದ್​ನಲ್ಲಿದ್ದಾರೆ. ಇದೀಗ ತಮ್ಮ ಹೆಂಡತಿ ಹಾಗೂ ಮಗನನ್ನು ನೋಡಲು ಅವಕಾಶ ನೀಡಬೇಕು ಎಂದು ಮಲಿಕ್​ ಪಾಕ್​ ಕ್ರಿಕೆಟ್​ ಮಂಡಳಿ ಬಳಿ ಮನವಿ ಮಾಡಿಕೊಂಡಿದ್ದು, ಅದಕ್ಕೆ ಪಿಸಿಬಿ ಗ್ರೀನ್​ ಸಿಗ್ನಲ್​ ನೀಡಿದೆ. ತಕ್ಷಣವೇ ಭಾರತಕ್ಕೆ ತೆರಳಿ ಪತ್ನಿ ಹಾಗೂ ಮಗನೊಂದಿಗೆ ಸಮಯ ಕಳೆದು ವಾಪಸ್​ ಆಗುವಂತೆ ಪಿಸಿಬಿ ಸೂಚನೆ ನೀಡಿರುವ ಕಾರಣ ಅವರು ಹೈದರಾಬಾದ್​ಗೆ ಆಗಮಿಸಲಿದ್ದಾರೆ.

ಇಂಗ್ಲೆಂಡ್​ ಜತೆ ಪಾಕ್​ ಮೂರು ಟಿ-20 ಹಾಗೂ ಮೂರು ಟೆಸ್ಟ್​ ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ಆಗಸ್ಟ್​ನಿಂದ ಸೆಪ್ಟೆಂಬರ್​ ತಿಂಗಳವರೆಗೂ ಈ ಸರಣಿ ನಡೆಯಲಿದೆ. 29 ಸದಸ್ಯರನ್ನೊಳಗೊಂಡ ತಂಡ ಜೂನ್​ 28ರಂದು ಪ್ರಯಾಣ ಬೆಳೆಸಲಿದ್ದು, 14 ದಿನಗಳ ಕಾಲ ಕ್ವಾರಂಟೈನ್​​ಗೆ ಒಳಗಾಗಲಿದ್ದಾರೆ. ನಂತರ ಅಭ್ಯಾಸದಲ್ಲಿ ಭಾಗಿಯಾಗಿ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ABOUT THE AUTHOR

...view details