ನವದೆಹಲಿ:ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನನ್ನ ಹೆಸರಿನ ಪೆವಿಲಿಯನ್ ಸ್ಟ್ಯಾಂಡ್ ಇರುವುದು ಸಂತೋಷದ ಸಂಗತಿ. ಇದು ನನ್ನ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುವ ವಿಚಾರವಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ರು.
ನನ್ನ ಜೀವನದಲ್ಲಿ ಸದಾ ನೆನಪಿರುವ ಸಂಗತಿ ಇದು: ವಿರಾಟ್ ಕೊಹ್ಲಿ - ವಿರಾಟ್ ಕೊಹ್ಲಿ ಪೆವಿಲಿಯನ್
ಅರುಣ್ ಜೇಟ್ಲಿ ಮೈದಾನದಲ್ಲಿ ನನ್ನ ಹೆಸರಿನ ಪೆವಿಲಿಯನ್ ಸ್ಟ್ಯಾಂಡ್ ಇರುವುದು ಮುಂದಿನ ಯುವ ಪೀಳಿಗೆಗೆ ಸ್ಫೂರ್ತಿ ತುಂಬಲಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ
ಈ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್, ಈ ಗೌರವವನ್ನು ದಯಪಾಲಿಸಿದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಮತ್ತು ಬಿಸಿಸಿಐಗೆ ಧನ್ಯವಾದ. ನನ್ನ ಹೆಸರಿನಲ್ಲಿ ಪೆವಿಲಿಯನ್ ಇರುವ ಸಂಗತಿಯನ್ನು ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅಲ್ಲದೇ, ಈ ಗೌರವ ನಮ್ಮ ದೇಶದ ಯುವ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಲಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ದೆಹಲಿ ಕ್ರಿಕೆಟ್ ಅಭಿವೃದ್ಧಿಗೆ ನೀಡಿದ ಕೊಡುಗೆ ಪರಿಗಣಿಸಿ ಫಿರೋಜ್ ಷಾ ಕೋಟ್ಲಾ ಮೈದಾನವನ್ನು ಅರುಣ್ ಜೇಟ್ಲಿ ಮೈದಾನ ಎಂದು ನಿನ್ನೆಯಷ್ಟೆ ಮರುನಾಮಕರಣ ಮಾಡಲಾಗಿತ್ತು.