ಕರ್ನಾಟಕ

karnataka

ETV Bharat / sports

ವಿಶ್ವಕಪ್​ ನಡೆಯದಿದ್ದರೆ ಐಪಿಎಲ್​ ಆಯೋಜನೆ ಮಾಡಿ: ಆಸ್ಟ್ರೇಲಿಯಾದ ವೇಗಿ - ಕೊರೊನಾ ವೈರಸ್​ ಸಾಂಕ್ರಾಮಿಕ

ವಿಶ್ವ ಪ್ರಸಿದ್ಧವಾದ ಕ್ರಿಕೆಟ್​ ಲೀಗ್​ ಆಗಿರುವ ಐಪಿಎಲ್ ಟೂರ್ನಿಯನ್ನು​ ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ತುಂಬಾ ದೀರ್ಘ ಸಮಯದಿಂದ ಬ್ರೇಕ್​ ತೆಗೆದುಕೊಂಡಿರುವ ಕ್ರಿಕೆಟ್​ಗೆ ಈ ಟೂರ್ನಿ ಶಕ್ತಿ ತುಂಬಲಿದೆ ಎಂದು ಆಸ್ಟ್ರೇಲಿಯಾದ ವೇಗಿ ಹೇಳಿದ್ದಾರೆ.

ಪ್ಯಾಟ್​ ಕಮ್ಮಿನ್ಸ್
ಪ್ಯಾಟ್​ ಕಮ್ಮಿನ್ಸ್

By

Published : May 28, 2020, 11:33 AM IST

Updated : May 28, 2020, 11:50 AM IST

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ-20 ವಿಶ್ವಕಪ್​ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ನಡೆಯುವ ಐಸಿಸಿ ಸಭೆಯಲ್ಲಿ ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್​ ನಡೆಯುವುದು ಅನುಮಾನವಾಗಿದೆ. ಅಲ್ಲಿ ಈಗಾಗಲೇ ವಿಮಾನ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ವಿಶ್ವಕಪ್​ ನಡೆಯದಿದ್ದರೆ ಐಪಿಎಲ್​ ನಡೆಸಿ ವಿಶ್ವಕಪ್​ನಿಂದಾಗುವ ನಷ್ಟವನ್ನು ತುಂಬಬಹುದು ಎಂದು ಆಸ್ಟ್ರೇಲಿಯಾದ ವೇಗಿ ಹಾಗೂ ಐಪಿಎಲ್​ನಲ್ಲಿ ಗರಿಷ್ಠ ಮೊತ್ತ ಪಡೆದಿರುವ ವಿದೇಶಿ ಆಟಗಾರ ಎಂಬ ಖ್ಯಾತಿ ಪಡೆದಿರುವ ಪ್ಯಾಟ್​ ಕಮ್ಮಿನ್ಸ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವ ಪ್ರಸಿದ್ಧವಾದ ಕ್ರಿಕೆಟ್​ ಲೀಗ್​ ಆಗಿರುವ ಐಪಿಎಲ್ ಟೂರ್ನಿಯನ್ನು​ ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ತುಂಬಾ ದೀರ್ಘ ಸಮಯದಿಂದ ಬ್ರೇಕ್​ ತೆಗೆದುಕೊಂಡಿರುವ ಕ್ರಿಕೆಟ್​ಗೆ ಈ ಟೂರ್ನಿ ಶಕ್ತಿ ತುಂಬಲಿದೆ ಎಂದು ಆಸ್ಟ್ರೇಲಿಯಾದ ವೇಗಿ ಹೇಳಿದ್ದಾರೆ.

ಐಪಿಎಲ್​ ನಡೆಯಬೇಕು ಎಂದು ಹೇಳುವುದಕ್ಕೆ ಸಾಕಷ್ಟು ಕಾರಣಗಳಿವೆ. ಆದರೆ ಬಹು ಮುಖ್ಯ ಕಾರಣವೆಂದರೆ ಅದೊಂದು ಅದ್ಭುತ ಟೂರ್ನಮೆಂಟ್​ ಎಂದು ಕಮ್ಮಿನ್ಸ್​ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್​ನ ಅಗ್ರ ಶ್ರೇಯಾಂಕಿತ ಬೌಲರ್ ಆಗಿರುವ ಪ್ಯಾಟ್ ಕಮ್ಮಿನ್ಸ್ ಅವರನ್ನು 2019ರ ಡಿಸೆಂಬರ್​ನಲ್ಲಿ ನಡೆದಿದ್ದ ಐಪಿಎಲ್​ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬರೋಬ್ಬರಿ 15.5 ಕೋಟಿ ರೂ. ನೀಡಿ ಖರೀದಿಸಿತ್ತು.

Last Updated : May 28, 2020, 11:50 AM IST

ABOUT THE AUTHOR

...view details