ಕರ್ನಾಟಕ

karnataka

ETV Bharat / sports

18 ವರ್ಷಗಳ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಟೇಲ್​ - Royal Challengers Bangalore f

ಪಾರ್ಥಿವ್ ಪಟೇಲ್‌​ 2002ರಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ ಬದುಕು ಶುರು ಮಾಡಿದ ಅವರು ಅತ್ಯಂತ ಕಿರಿಯ ಬ್ಯಾಟ್ಸ್​ಮನ್​ ಎಂದು ಕರೆಸಿಕೊಂಡಿದ್ದರು. ನಂತರ ಪ್ರತಿಭಾನ್ವಿತ ಆಟಗಾರರಾದ ದಿನೇಶ್ ಕಾರ್ತಿಕ್​ ಮತ್ತು ಮಹೇಂದ್ರ ಸಿಂಗ್​ ಧೋನಿಯವರಿಂದ ಎದುರಾದ ಬಲವಾದ ಸ್ಪರ್ಧೆಯಿಂದ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶ ಅವರಿಗೆ ಸಿಗಲಿಲ್ಲ.

ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಪಾರ್ಥೀವ್ ಪಟೇಲ್​
ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಪಾರ್ಥೀವ್ ಪಟೇಲ್​

By

Published : Dec 9, 2020, 11:58 AM IST

Updated : Dec 9, 2020, 12:36 PM IST

ಮುಂಬೈ:ಭಾರತ ತಂಡದ ಹಿರಿಯ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ ಪಾರ್ಥಿವ್​ ಪಟೇಲ್​ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಕ್ರಿಕೆಟಿಗ 2016ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.​

ಬುಧವಾರ ಟ್ವಿಟರ್​ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಎಡಗೈ ಬ್ಯಾಟ್ಸ್​ಮನ್​ ಪಟೇಲ್‌ ಭಾರತದ ಪರ 25 ಟೆಸ್ಟ್​, 38 ಏಕದಿನ ಮತ್ತು 2 ಟಿ20 ಪಂದ್ಯಗಳನ್ನಾಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅವರು ಗುಜರಾತ್​ ಪರ 194 ಪಂದ್ಯಗಳನ್ನಾಡಿದ್ದಾರೆ.

2002ರಲ್ಲಿ ಇಂಗ್ಲೆಂಡ್​ ವಿರುದ್ಧ ಪಟೇಲ್‌ ಟೆಸ್ಟ್​ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆದರೆ ನಂತರ ಅವರು ದಿನೇಶ್ ಕಾರ್ತಿಕ್​ ಮತ್ತು ಮಹೇಂದ್ರ ಸಿಂಗ್​ ಧೋನಿಯವರಿಂದ ಎದುರಾದ ಸಾಕಷ್ಟು ಸ್ಪರ್ಧೆಯಿಂದ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶ ಅವರಿಗೆ ಸಿಗಲಿಲ್ಲ.

"18 ವರ್ಷದ ಕ್ರಿಕೆಟ್​ ಪ್ರಯಾಣದಲ್ಲಿ ನಾನು ಪರದೆಯನ್ನು ತಿರುಗಿಸಿದಾಗ, ಅನೇಕರಿಗೆ ಕೃತಜ್ಞತೆ ಹೇಳಲು ಬಯಸುತ್ತೇನೆ. ಭಾರತ ತಂಡಕ್ಕಾಗಿ ಆಡುವುದಕ್ಕೆ ಕೇವಲ 17 ವರ್ಷದ ಬಾಲಕನ ಮೇಲೆ ಬಿಸಿಸಿಐ ಉದಾರವಾದ ವಿಶ್ವಾಸ ಮತ್ತು ನಂಬಿಕೆಯನ್ನು ತೋರಿಸಿತ್ತು. ನನ್ನ ವೃತ್ತಿಜೀವನದ ಆರಂಭದ ವರ್ಷಗಳಲ್ಲಿ ಮಾರ್ಗದರ್ಶನ ನೀಡಿ, ಕೈ ಹಿಡಿದಿದ್ದಕ್ಕಾಗಿ ಅಪಾರವಾದ ಕೃತಜ್ಞತೆ ಇದೆ ಎಂದು ತಿಳಿಸಬಯಸುತ್ತೇನೆ" ಎಂದು ಪಟೇಲ್ ತಮ್ಮ ಸುದೀರ್ಘ ಟ್ವಿಟರ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

2016-17ರ ಆವೃತ್ತಿಯಲ್ಲಿ ಗುಜರಾತ್ ತಂಡ ಪಾರ್ಥಿವ್ ಪಟೇಲ್ ನಾಯಕತ್ವದಲ್ಲಿ ರಣಜಿ ಚಾಂಪಿಯನ್ ಆಗಿತ್ತು.

ಪಾರ್ಥಿವ್​ ಪಟೇಲ್​ ಅವರ ವಿಶೇಷತೆ ಏನೆಂದರೆ ಅವರು ರಣಜಿಗೂ ಮೊದಲೇ ಭಾರತದ ಪರ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು 2004 ರಲ್ಲಿ ಮೊದಲ ರಣಜಿ ಪಂದ್ಯವಾಡಿದ್ದರು.

ಪಾರ್ಥಿವ್​ ಬಹುಬೇಗ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರಾದರೂ ಅವರಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ. 25 ಟೆಸ್ಟ್​ ಪಂದ್ಯಗಳಿಂದ 934 ರನ್​ಗಳಿಸಿದ್ದಾರೆ. ಅದರಲ್ಲಿ 6 ಅರ್ಧಶತಕ ಸೇರಿವೆ. ಇನ್ನು 38 ಏಕದಿನ ಪಂದ್ಯಗಳಿಂದ 736 ರನ್​ ಹಾಗೂ 2 ಟಿ20 ಪಂದ್ಯಗಳಿಂದ 36 ರನ್​ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 194 ಪಂದ್ಯಗಳಿಂದ 11,000 ರನ್​ ಸಿಡಿಸಿದ್ದಾರೆ. ಇದರಲ್ಲಿ 27 ಶತಕ ಹಾಗೂ 67 ಅರ್ಧಶತಕ ಸೇರಿದೆ. ಐಪಿಎಲ್ ಸೇರಿದಂತೆ 204 ಟಿ20 ಪಂದ್ಯಗಳಲ್ಲಿ 23 ಅರ್ಧಶತಕ ಸೇರಿದಂತೆ 4,300 ರನ್​ಗಳಿಸಿದ್ದಾರೆ.

Last Updated : Dec 9, 2020, 12:36 PM IST

ABOUT THE AUTHOR

...view details