ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​, ಆಸ್ಟ್ರೇಲಿಯಾ, ಭಾರತದಲ್ಲಿ ರಿಷಭ್​ ಶತಕ: ಈ ಸಾಧನೆಗೈದ 2ನೇ ವಿಕೆಟ್​ ಕೀಪರ್​ - ಮೂರನೇ ಶತಕ ಸಿಡಿಸಿದ ಪಂತ್​​

ಟೀಂ ಇಂಡಿಯಾ ಯುವ ವಿಕೆಟ್​ ಕೀಪರ್ ರಿಷಭ್​ ಪಂತ್​ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ವೃತ್ತಿ ಜೀವನದ ಮೂರನೇ ಶತಕ ಸಿಡಿಸಿದರು.

Rishabh Pant
Rishabh Pant

By

Published : Mar 5, 2021, 8:06 PM IST

ಅಹಮದಾಬಾದ್​:ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್​​​ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್​​ ಕೀಪರ್ ರಿಷಭ್​ ಪಂತ್​ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದು, ಈ ಮೂಲಕ ಹೊಸ ದಾಖಲೆ ಬರೆದರು.

ಇಂಗ್ಲೆಂಡ್​ ವಿರುದ್ಧ ರಿಷಭ್ ಶತಕ ಸಾಧನೆ

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ಶತಕ ಸಿಡಿಸಿರುವ ಜತೆಗೆ ಟೆಸ್ಟ್​​ನಲ್ಲಿ ಮೂರನೇ ಸೆಂಚುರಿ ಹೊಡೆದಿರುವ ಸಾಧನೆ ಮಾಡಿದ್ದು, ಜತೆಗೆ ಇಂಗ್ಲೆಂಡ್​, ಆಸ್ಟ್ರೇಲಿಯಾ ಹಾಗೂ ಭಾರತದಲ್ಲೂ ಶತಕ ಸಿಡಿಸಿ ಸೈ ಎನ್ನಿಸಿಕೊಂಡಿದ್ದಾರೆ. ಪಂತ್ ಈ ವಿಶೇಷ ದಾಖಲೆ​ ಬರೆದಿರುವ ವಿಶ್ವದ ಎರಡನೇ ವಿಕೆಟ್​ ಕೀಪರ್​ ಆಗಿದ್ದಾರೆ.

ಇದನ್ನೂ ಓದಿ: ರಿಷಭ್​ ಪಂತ್​ ಶತಕದ ಸೊಗಸು; ಸುಂದರ್​ ಫಿಫ್ಟಿ: ಭಾರತಕ್ಕೆ 89ರನ್​ಗಳ ಮುನ್ನಡೆ

ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿಕೆಟ್​ ಕೀಪರ್ ಆ್ಯಡಂ ಗಿಲ್​ಕ್ರಿಸ್ಟ್​ ಈ ದಾಖಲೆ ನಿರ್ಮಿಸಿದ್ದರು. ಈ ಹಿಂದೆ ವೆಸ್ಟ್​ ಇಂಡೀಸ್​ ವಿರುದ್ಧ 2018ರಲ್ಲಿ ನಡೆದಿದ್ದ ಟೆಸ್ಟ್​​ ಪಂದ್ಯದ ವೇಳೆ ಪಂತ್​​ ಕ್ರಮವಾಗಿ 90, 92, 92ರನ್​ಗಳಿಕೆ ಮಾಡಿದ್ದರು. ಜತೆಗೆ 2021ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ 91ರನ್​ ಗಳಿಕೆ ಮಾಡಿದ್ದರು.

2018ರಲ್ಲಿ ಇಂಗ್ಲೆಂಡ್ ವಿರುದ್ಧ ಓವೆಲ್​​ನಲ್ಲಿ 144ರನ್ (ಮೊದಲ ಶತಕ)​ ಹಾಗೂ 2019ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ 159 ರನ್ ​ಗಳಿಕೆ(ಎರಡನೇ ಶತಕ) ಮಾಡಿದ್ದರು.

ABOUT THE AUTHOR

...view details