ಕರ್ನಾಟಕ

karnataka

ETV Bharat / sports

ಪಂತ್ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರತಿಭೆ, ಕೀಪಿಂಗ್​ನಲ್ಲಿ ತೊಟ್ಟಿಲಲ್ಲಿರುವ ಮಗು: ಸಯ್ಯದ್ ಕಿರ್ಮಾನಿ ವಿಶ್ಲೇಷಣೆ - ಪಂತ್ ಬ್ಯಾಟಿಂಗ್​

23 ವರ್ಷದ ಪಂತ್​ ಆಸ್ಟ್ರೇಲಿಯಾದ ಭದ್ರಕೋಟೆ ಗಬ್ಬಾದಲ್ಲಿ ದಿಗ್ವಿಜಯ ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು. ಆದರೆ, ವಿಕೆಟ್​ ಕೀಪಿಂಗ್​ ವಿಚಾರದಲ್ಲಿ ಮಾತ್ರ ಭಾರಿ ಟೀಕೆಗೆ ಗುರಿಯಾಗಿದ್ದರು.

By

Published : Feb 9, 2021, 7:45 PM IST

ಪುಣೆ: ಟೀಮ್ ಇಂಡಿಯಾದ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್ ಪಂತ್​ ಬ್ಯಾಟ್ಸ್​ಮನ್​ ಆಗಿ ಅದ್ಭುತ ಪ್ರತಿಭೆ ಹೊಂದಿದ್ದಾರೆ. ಆದರೆ, ಯುವ ಆಟಗಾರ ವಿಕೆಟ್​ ಕೀಪಿಂಗ್​ನಲ್ಲಿ ಇನ್ನೂ ತೊಟ್ಟಿಲಲ್ಲಿರುವ ಮಗು ಎಂದು ಮಾಜಿ ವಿಕೆಟ್​ ಕೀಪರ್ ಸಯ್ಯದ್ ಕಿರ್ಮಾನಿ ಅಭಿಪ್ರಾಯ ಪಟ್ಟಿದ್ದಾರೆ.

23 ವರ್ಷದ ಪಂತ್​ ಆಸ್ಟ್ರೇಲಿಯಾದ ಭದ್ರಕೋಟೆ ಗಬ್ಬಾದಲ್ಲಿ ದಿಗ್ವಿಜಯ ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು. ಆದರೆ, ವಿಕೆಟ್​ ಕೀಪಿಂಗ್​ ವಿಚಾರದಲ್ಲಿ ಮಾತ್ರ ಭಾರಿ ಟೀಕೆಗೆ ಗುರಿಯಾಗಿದ್ದರು.

" ರಿಷಭ್ ಪಂತ್​ ಬ್ಯಾಟಿಂಗ್​ನಲ್ಲಿ ಅದ್ಧುತ ಪ್ರತಿಭೆಯನ್ನು ಪಡೆದಿದ್ದಾರೆ. ಅವರ ನೈಸರ್ಗಿಕವಾಗಿ ದಂಡಿಸುವ ಕೌಶಲ್ಯತೆ ಹೊಂದಿದ್ದಾರೆ​. ಆದರೆ, ವಿಕೆಟ್ ಕೀಪಿಂಗ್​ನಲ್ಲಿ ಮಾತ್ರ ಇನ್ನು ತೊಟ್ಟಿಲಿನಲ್ಲಿದ್ದಾರೆ. ಅವರು ಇನ್ನು ಬಹಳಷ್ಟನ್ನು ಕಲಿಯಬೇಕಾಗಿದೆ. ಜೊತೆಗೆ ಆಸ್ಟ್ರೇಲಿಯಾದಲ್ಲಿ ತೋರಿದ ಪ್ರದರ್ಶನದ ರೀತಿ ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಬೇಕೆಂಬುದರ ಬಗ್ಗೆ ಇನ್ನೂ ಸುಧಾರಿಸಬೇಕಿದೆ ಎಂದು ಕಿರ್ಮಾನಿ ತಿಳಿಸಿದ್ದಾರೆ.

ಪಂತ್​ ವಿಕೆಟ್​ ಕೀಪಿಂಗ್​ ಬಗ್ಗೆ ಕೆಲುವು ಸಲಹೆಗಳನ್ನು ನೀಡಿರುವ ಅವರು, ಪಂತ್ ವಿಕೆಟ್ ಕೀಪಿಂಗ್​ನಲ್ಲಿ ಮೂಲ ತಂತ್ರಗಳನ್ನು ಹೊಂದಿರಬೇಕು, ಅವರ ವಿಶ್ವದ ವೇಗದ ಬೌಲರ್​ಗೆ ಕೀಪಿಂಗ್​ ಮಾಡುವುದು ಸುಲಭ, ಏಕೆಂದರೆ ಅಲ್ಲಿ ಸಾಕಷ್ಟು ಸಮಯವಿರುತ್ತದೆ. ಆದರೆ ಸ್ವಿಂಗ್ ಬೌಲರ್​ಗಳಿಗೆ ಕೀಪಿಂಗ್ ಮಾಡುವಾಗ ಚೆಂಡಿನ ಬೌನ್ಸ್​ ಮತ್ತು ಅದಕ್ಕೆ ಅನುಗುಣವಾಗಿ ಚಲನೆ ಮಾಡಬೇಕಿರುತ್ತದೆ ಎಂದು 1976 ರಿಂದ 1986ರ ವರೆಗೆ 88 ಟೆಸ್ಟ್​ ಮತ್ತು 49 ಏಕದಿನ ಪಂದ್ಯಗಳನ್ನಾಡಿರುವ ಕಿರ್ಮಾನಿ ಹೇಳಿದ್ದಾರೆ.

ಆದರೂ ಪಂತ್​ ಬ್ರಿಸ್ಬೇನ್​ನಲ್ಲಿ ತೋರಿದ ಬ್ಯಾಟಿಂಗ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಿರ್ಮಾನಿ, ಆತ ಕೇವಲ 20ರ ವಯೋಮಾನದವನಾಗಿದ್ದಾನೆ, ಕಲಿಯಲು ಇನ್ನೂ ಅವಕಾಶವಿದೆ. ಸಂದರ್ಭಕ್ಕೆ ತಕ್ಕಂತೆ ತಾಳ್ಮೆಯ ಆಟವನ್ನು ಮೈಗೂಡಿಸಿಕೊಳ್ಳಬೇಕು, ವಿಕೆಟ್​ ಕೈಚೆಲ್ಲಬಾರದು ಎಂದು ತಿಳಿಸಿದ್ದಾರೆ.

ಇದನ್ನು ಓದಿ:2ನೇ ಇನ್ನಿಂಗ್ಸ್​ನಲ್ಲಿ ಡಿಕ್ಲೇರ್​ ಘೋಷಿಸದಿರಲು ರಿಷಭ್ ಪಂತ್ ಭೀತಿ ಕಾರಣ: ಜೋ ರೂಟ್​

ABOUT THE AUTHOR

...view details