ಮುಂಬೈ:ಮುಂಬೈನಲ್ಲಿ ನಡೆಯುತ್ತಿರುವ ಡಿವೈ ಪಾಟೀಲ್ ಟಿ-20 ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಮತ್ತೊಂದು ಶತಕ ಸಿಡಿಸಿ, ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
20 ಸಿಕ್ಸರ್, 55 ಎಸೆತಗಳಲ್ಲಿ 158 ರನ್.. ಪಾಂಡ್ಯ ಮತ್ತೊಂದು ಶತಕ, ಟಿ-20 ಇತಿಹಾಸದಲ್ಲಿ ಹೊಸ ದಾಖಲೆ! - ಡಿವೈ ಪಾಟೀಲ್ ಕ್ರಿಕೆಟ್ ಟೂರ್ನಿ
ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ದೇಶೀಯ ಕ್ರಿಕೆಟ್ನಲ್ಲಿ ರನ್ಮಳೆ ಹರಿಸುತ್ತಿದ್ದು, ಡಿವೈ ಪಾಟೀಲ್ ಟಿ-20 ಕ್ರಿಕೆಟ್ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
![20 ಸಿಕ್ಸರ್, 55 ಎಸೆತಗಳಲ್ಲಿ 158 ರನ್.. ಪಾಂಡ್ಯ ಮತ್ತೊಂದು ಶತಕ, ಟಿ-20 ಇತಿಹಾಸದಲ್ಲಿ ಹೊಸ ದಾಖಲೆ! Hardik Pandya](https://etvbharatimages.akamaized.net/etvbharat/prod-images/768-512-6316831-thumbnail-3x2-wdfddfdfd.jpg)
16ನೇ ಆವೃತ್ತಿ ಡಿವೈ ಪಾಟೀಲ್ ಟಿ-20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬಿಪಿಸಿಎಲ್ ತಂಡದ ವಿರುದ್ಧ ಅಬ್ಬರಿಸಿರುವ ಹಾರ್ದಿಕ್ ಪಾಂಡ್ಯಾ 39 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದು, 55 ಎಸೆತಗಳಲ್ಲಿ ಬರೋಬ್ಬರಿ ಅಜೇಯ 158ರನ್ಗಳಿಕೆ ಮಾಡಿದ್ದಾರೆ. ರಿಲಯನ್ಸ್1 ತಂಡದ ಪರ ಬ್ಯಾಟ್ ಬೀಸಿರುವ ಹಾರ್ದಿಕ್ 20 ಸಿಕ್ಸರ್ ಹಾಗೂ 6 ಬೌಂಡರಿ ಸಿಡಿಸಿದ್ದಾರೆ. ಒಟ್ಟು 120ರನ್ ಸಿಕ್ಸರ್ ಸಿಡಿಸುವ ಮೂಲಕ ತೆಗೆದುಕೊಂಡಿರುವ ಹಾರ್ದಿಕ್, 24ರನ್ ಬೌಂಡರಿಗಳ ಮೂಲಕ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಅಂದರೆ 158ರನ್ಗಳ ಪೈಕಿ ಒಟ್ಟು 144ರನ್ ಸಿಕ್ಸರ್-ಬೌಂಡರಿಗಳ ಮೂಲಕ ಬಂದಿರುವುದು ವಿಶೇಷವಾಗಿದೆ. 20 ಓವರ್ನಲ್ಲಿ ರಿಲಯನ್ಸ್1 ತಂಡ ಬರೋಬ್ಬರಿ 238ರನ್ಗಳಿಕೆ ಮಾಡಿರುವುದು ವಿಶೇಷ.
ಇದಕ್ಕೂ ಹಿಂದಿನ ಪಂದ್ಯದಲ್ಲಿ ಸಿಎಜಿ ವಿರುದ್ಧ ಹಾರ್ದಿಕ್ ಪಾಂಡ್ಯ 37 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಕೆಲವೇ ದಿನಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಪ್ರಕಟಗೊಳ್ಳಲಿದ್ದು, ತಂಡ ಸೇರಿಕೊಳ್ಳುವ ಉತ್ಸುಕದಲ್ಲಿರುವ ಪಾಂಡ್ಯ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಈ ಹಿಂದೆ ಸೈಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ 147ರನ್ಗಳಿಕೆ ಮಾಡಿದ್ದು, ಟಿ-20 ಅತಿ ಹೆಚ್ಚಿನ ವೈಯಕ್ತಿಕ ಸ್ಕೋರ್ ಎಣಿಸಿಕೊಂಡಿತ್ತು. ಆದರೆ ಇದೀಗ ಆ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ ಹಾರ್ದಿಕ್ ಪಾಂಡ್ಯ.