ಕರ್ನಾಟಕ

karnataka

ETV Bharat / sports

ಹಾರ್ದಿಕ್ ಪಾಂಡ್ಯ ಸ್ಫೋಟಕ ಆಟ : ರಾಯಲ್ಸ್​ಗೆ 196 ರನ್​ಗಳ ಟಾರ್ಗೆಟ್ ನೀಡಿದ ಮುಂಬೈ - RR squad today

ಕೊನೆಯ 2 ಓವರ್​ಗಳಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಕೇವಲ 21 ಎಸೆತಗಳಲ್ಲಿ 7 ಸಿಕ್ಸರ್ಸ್ ಹಾಗೂ 2 ಬೌಂಡರಿ ಸಹಿತ ಔಟಾಗದೆ 60 ರನ್​ಗಳಿಸಿದರಲ್ಲದೆ ಮುಂಬೈ ಮೊತ್ತವನ್ನು 195 ರನ್​​ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

By

Published : Oct 25, 2020, 9:31 PM IST

ಅಬುಧಾಭಿ:ಹಾರ್ದಿಕ್ ಪಾಂಡ್ಯ(60) ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು​ 195 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ.

ಆರಂಭಿಕ ಬ್ಯಾಟ್ಸ್​ಮನ್ ಡಿಕಾಕ್ ಕೇವಲ 6 ರನ್​ಗಳಿಗೆ ಔಟಾಗಿ ನಿರಾಶೆಯನುಭವಿಸಿದರು. ಆದರೆ ಇಶಾನ್ ಕಿಶನ್​ 37 ಹಾಗೂ ಸೂರ್ಯಕುಮಾರ್ ಯಾದವ್​ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 40 ರನ್​ಗಳಿಸಿ ಆರಂಭಿಕ ಆಘಾತಕ್ಕೊಳಗಾಗಿದ್ದ ಮುಂಬೈಗೆ ಚೇತರಿಕೆ ನೀಡಿದರು.

ನಂತರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಸೌರಭ್ ತಿವಾರಿ 25 ಎಸೆತಗಳಲ್ಲಿ 34 ರನ್​ಗಳಿಸಿದರೆ, ಕೊನೆಯ 2 ಓವರ್​ಗಳಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಕೇವಲ 21 ಎಸೆತಗಳಲ್ಲಿ 7 ಸಿಕ್ಸರ್ಸ್ ಹಾಗೂ 2 ಬೌಂಡರಿ ಸಹಿತ ಔಟಾಗದೆ 60 ರನ್​ಗಳಿಸಿದರಲ್ಲದೆ ಮುಂಬೈ ಮೊತ್ತವನ್ನು 195ಕ್ಕೇರಿಸಿದರು.

ರಾಜಸ್ಥಾನ್ ರಾಯಲ್ಸ್ ಪರ ಆರ್ಚರ್​ 31ರನ್​ ನೀಡಿ 2 ವಿಕೆಟ್, ಶ್ರೇಯಸ್ ಗೋಪಾಲ್ 30 ರನ್​ ನೀಡಿ 2 ವಿಕೆಟ್​ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಆದರೆ ಯುವ ಬೌಲರ್​ ಕಾರ್ತಿಕ್ ತ್ಯಾಗಿ 45 ರನ್​, ಅಂಕಿತ್ ರಜಪೂತ್​ 50 ರನ್​ ನೀಡಿದ ದುಬಾರಿಯಾದರು.​

ABOUT THE AUTHOR

...view details