ಕರ್ನಾಟಕ

karnataka

ETV Bharat / sports

ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಭಾರತದ ನಂತರ ಈ ಸಾಧನೆ ಮಾಡಿದ ಏಕೈಕ ತಂಡ ಪಾಕಿಸ್ತಾನ!

ಪಾಕಿಸ್ತಾನದ ಪರ ಆರಂಭಿಕರಾದ ಶಾನ್​ ಮಸೂದ್​ 135, ಅಬಿದ್​ ಅಲಿ 174, ಅಜರ್​ ಅಲಿ 118 ಹಾಗೂ ಬಾಬರ್​ ಅಜಂ ಔಟಾಗದೆ 100 ರನ್​ಗಳಿಸುವ ಮೂಲ ಬೃಹತ್​ ಮೊತ್ತಕ್ಕೆ ಕಾರಣರಾದರು. ಅಲ್ಲದೆ ಪಾಕಿಸ್ತಾನದ ಮೊದಲ ನಾಲ್ಕು ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಶತಕ ಸಿಡಿಸಿ ದಾಖಲೆ ಬರೆದರು. ಇದು ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಮೂಡಿಬಂದ ಎರಡನೇ ನಿದರ್ಶನವಾಗಿದೆ.

Pakistan's top-four batsmen score hundred
Pakistan's top-four batsmen score hundred

By

Published : Dec 22, 2019, 7:16 PM IST

ಕರಾಚಿ: ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಮೊದಲ ನಾಲ್ಕು ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಶತಕ ಬಾರಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಈ ಸಾಧನೆಗೈದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶ್ರೀಲಂಕಾ ವಿರುದ್ಧ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 191 ರನ್​ಗಳಿಗೆ ಆಲೌಟ್​ ಆಗಿದ್ದ ಪಾಕಿಸ್ತಾನ ಎರಡನೇ ಇನ್ನಿಂಗ್ಸ್​ನಲ್ಲಿ 80 ರನ್​ಗಳ ಹಿನ್ನೆಡೆಯೊಂದಿಗೆ ಬ್ಯಾಟಿಂಗ್​ ಆರಂಭಿಸಿ ಬರೋಬ್ಬರಿ 555 ರನ್​ಗಳ ಶಿಖರ ಕಟ್ಟಿದೆ.

ಪಾಕಿಸ್ತಾನದ ಪರ ಆರಂಭಿಕರಾದ ಶಾನ್​ ಮಸೂದ್​ 135, ಅಬಿದ್​ ಅಲಿ 174, ಅಜರ್​ ಅಲಿ 118 ಹಾಗೂ ಬಾಬರ್​ ಅಜಂ ಔಟಾಗದೆ 100 ರನ್​ಗಳಿಸುವ ಮೂಲಕ ಬೃಹತ್​ ಮೊತ್ತಕ್ಕೆ ಕಾರಣರಾದರು. ಅಲ್ಲದೆ ಪಾಕಿಸ್ತಾನದ ಮೊದಲ ನಾಲ್ಕು ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಶತಕ ಸಿಡಿಸಿ ಅಪರೂಪದ ದಾಖಲೆ ಬರೆದರು. ಇದು ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಮೂಡಿಬಂದ ಎರಡನೇ ಅಪರೂಪದ ನಿದರ್ಶನ.

ಈ ಮೊದಲು ಭಾರತ ತಂಡದ ಬ್ಯಾಟ್ಸ್​ಮನ್​ಗಳು 2007 ರಲ್ಲಿ ಶ್ರೀಲಂಕಾ ವಿರುದ್ಧವೇ ಈ ಸಾಧನೆ ಮಾಡಿದ್ದರು. ದಿನೇಶ್​ ಕಾರ್ತಿಕ್​, ವಾಸಿಂ ಜಾಫರ್​, ರಾಹುಲ್​ ದ್ರಾವಿಡ್ ಹಾಗೂ ಸಚಿನ್​ ತೆಂಡೂಲ್ಕರ್​ ವೈಯಕ್ತಿಕ ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಈ ಟೆಸ್ಟ್​ ಪಂದ್ಯದಲ್ಲಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್​ ಹಿನ್ನೆಡೆಯ ನಡುವೆಯೂ ಶ್ರೀಲಂಕಾ ತಂಡಕ್ಕೆ 475 ರನ್​ಗಳ ಬೃಹತ್​ ಟಾರ್ಗೆಟ್​ ನೀಡಲು ಯಶಸ್ವಿಯಾಗಿದೆ. ಈಗಾಗಲೆ ಶ್ರೀಲಂಕಾ 4ನೇ ದಿನದಾಟದಂತ್ಯಕ್ಕೆ 7 ವಿಕೆಟ್​ ಕಳೆದಿಕೊಂಡಿದೆ. ಸೋಮವಾರ ಅಂತಿಮ ದಿನವಾಗಿದ್ದು ಕೇವಲ 3 ವಿಕೆಟ್​ ಪಡೆದರೆ ಪಾಕ್​ 10 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್​ ಸರಣಿ ಗೆದ್ದ ಸಂಭ್ರಮಕ್ಕೆ ಪಾತ್ರವಾಗಲಿದೆ.

ABOUT THE AUTHOR

...view details