ಕರ್ನಾಟಕ

karnataka

ETV Bharat / sports

ಪಾಕ್‌ ಕ್ರಿಕೆಟಿಗರು ಸುಳ್ಳು ವಯಸ್ಸು ಹೇಳುತ್ತಿರುವುದು ಆಸಿಫ್‌ ಹೇಳಿಕೆಯಿಂದ ಬಹಿರಂಗ! - Pakistan pacers are doing age fraud

ಪಾಕ್ ಆಟಗಾರರಿಗೆ ತುಂಬಾ ವಯಸ್ಸಾಗಿದೆ. ಕೇವಲ ಪೇಪರ್​ನಲ್ಲಿ ಮಾತ್ರ ಅವರಿಗೆ 17-18 ವರ್ಷಗಳೆಂದು ತೋರಿಸಲಾಗುತ್ತಿದೆ. ವಾಸ್ತವವಾಗಿ ಅವರೆಲ್ಲರಿಗೂ 27-29ವರ್ಷಗಳಾಗಿವೆ- ಮಾಜಿ ವೇಗಿ ಮೊಹಮ್ಮದ್​ ಆಸಿಫ್

Mohammad Asif
ಮೊಹಮ್ಮದ್ ಆಸಿಫ್​

By

Published : Jan 2, 2021, 3:05 PM IST

ಕರಾಚಿ: ಪ್ರಸ್ತುತ ಪಾಕಿಸ್ತಾನ ತಂಡದಲ್ಲಿರುವ ವೇಗಿಗಳು ಅವರ ಜನನ ಪ್ರಮಾಣದಲ್ಲಿರುವ ಜನ್ಮದಿನಾಂಕಕ್ಕಿಂತ 8 ರಿಂದ 9 ವರ್ಷ ದೊಡ್ಡವರೆಂದು ಮಾಜಿ ವೇಗಿ ಮೊಹಮ್ಮದ್​ ಆಸಿಫ್ ತಿಳಿಸಿದ್ದಾರೆ.

ಮೌಂಟ್​ ಮಾಂಗನುಯ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕ್ 101 ರನ್ನುಗಳ ಅಂತರದಲ್ಲಿ‌ ಸೋತ ಬಳಿಕ ಆಸಿಫ್​ ಈ ಹೇಳಿಕೆ ನೀಡಿದ್ದಾರೆ.

ಆಟಗಾರರಿಗೆ ವಯಸ್ಸು ಹೆಚ್ಚಾಗಿರುವುದರಿಂದಲೇ ಲಾಂಗ್ ಸ್ಪೆಲ್​ ಬೌಲಿಂಗ್ ಮಾಡಲು ಆಗುತ್ತಿಲ್ಲ ಅನ್ನೋದು ಅವರ ಅಭಿಪ್ರಾಯ.

ಮೊಹಮ್ಮದ್ ಆಸಿಫ್​ (ಸಂಗ್ರಹ ಚಿತ್ರ)

"ಪಾಕ್ ಆಟಗಾರರಿಗೆ ತುಂಬಾ ವಯಸ್ಸಾಗಿದೆ. ಕೇವಲ ಪೇಪರ್​ನಲ್ಲಿ ಮಾತ್ರ ಅವರಿಗೆ 17-18 ವರ್ಷಗಳೆಂದು ತೋರಿಸಲಾಗುತ್ತಿದೆ. ವಾಸ್ತವವಾಗಿ ಅವರೆಲ್ಲರಿಗೂ 27-29ವರ್ಷಗಳಾಗಿವೆ" ಎಂದು ಕಮ್ರಾನ್ ಅಕ್ಮಲ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಆಟಗಾರರ ಹೆಸರುಗಳನ್ನು ಅವರು ಬಹಿರಂಗಪಡಿಸಿಲ್ಲ.

"ಬೌಲರ್‌ಗಳು 20-25 ಓವರ್​ಗಳನ್ನು ಬೌಲ್ ಮಾಡುವ ಸಾಮರ್ಥ್ಯ ಹೊಂದಿಲ್ಲ. ದೇಹವನ್ನು ಹೇಗೆ ಬಗ್ಗಿಸುವುದು ಎಂಬುದೇ ಅವರಿಗೆ ತಿಳಿದಿಲ್ಲ. ಕೇವಲ 5-6 ಓವರ್ ಎಸೆದ ನಂತರ ಅವರಿಗೆ ಮೈದಾನದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ" ಎಂದು ಆಸಿಫ್​ ಹೇಳುತ್ತಾರೆ.

ಪ್ರಸ್ತುತ ಪಾಕ್ ತಂಡದಲ್ಲಿರುವ ವೇಗಿಗಳಾದ ಶಹೀನ್ ಅಫ್ರಿದಿ, ನಸೀಮ್​ ಶಾ ಅವರ ವಯಸ್ಸು ಕ್ರಮವಾಗಿ 20 ಮತ್ತು 17 ಎಂದು ತೋರಿಸಲಾಗುತ್ತಿದೆ. ಮೊಹಮ್ಮದ್​ ಅಬ್ಬಾಸ್​ಗೆ 30 ಮತ್ತು ಫಹೀಮ್​ ಅಶ್ರಫ್​ಗೆ 26 ವಯಸ್ಸಾಗಿದೆ ಎಂದು ಪಿಸಿಬಿ ಹೇಳುತ್ತಿದೆ.

ಓದಿ:ದಾದಾಗೆ ಕಾಡಿದ ಎದೆ ನೋವು.. ಡೋಂಟ್​ವರಿ ಇಂದೇ ಬಿಡುಗಡೆಯಾಗಲಿದ್ದಾರೆ ಗಂಗೂಲಿ

ABOUT THE AUTHOR

...view details