ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಮೇಲೆ ಇಷ್ಟೊಂದು ಕ್ರೇಜ್? ಮದ್ವೆ ಮಾಡ್ಕೊಳ್ಳೋದು ಬಿಟ್ಟು ಮ್ಯಾಚ್​​​ ನೋಡಿದ್ರು!

ಟಿವಿಯಲ್ಲಿ ಇಲ್ಲವೇ ಮೈದಾನಕ್ಕೆ ಹೋಗಿ ಕ್ರಿಕೆಟ್​ ನೋಡುವ ಕ್ರೇಜ್‌​ ಅನೇಕರಿಗಿದೆ. ಆದರೆ ಮದುವೆ ಸಮಾರಂಭದಲ್ಲೂ ಪಂದ್ಯ ವೀಕ್ಷಿಸೋದು ಅತಿ ವಿರಳ. ಆದರೆ ಇಲ್ಲೊಂದು ಜೋಡಿ ಏನ್ಮಾಡಿದ್ರು ಗೊತ್ತೇ?

ನವಜೋಡಿಗೆ ಕ್ರಿಕೆಟ್​ ನೋಡುವ ಕ್ರೇಜ್​​

By

Published : Nov 6, 2019, 6:14 PM IST

ಕರಾಚಿ:ಮದುವೆ ಮಾಡಿಕೊಳ್ಳುವ ಜೋಡಿ ಖುಶಿಯಲ್ಲಿ ಎಲ್ಲರೊಂದಿಗೆ ಫೋಟೋಶೂಟ್​ ಮಾಡಿಸಿಕೊಳ್ಳುವುದು, ಮನೆಗೆ ಬಂದ ಅತಿಥಿಗಳೊಂದಿಗೆ ಮಾತನಾಡುವುದೆಲ್ಲಾ ಮದುವೆ ಕಾರ್ಯಕ್ರಮಗಳಲ್ಲಿ ಕಾಮನ್. ಆದ್ರೆ ಇಲ್ಲೊಂದು ಜೋಡಿ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಅಪರೂಪದ ಘಟನೆ ನಡೆದಿದೆ.

ನಿನ್ನೆ ಪಾಕಿಸ್ತಾನ-ಆಸ್ಟ್ರೇಲಿಯಾ ತಂಡಗಳ ನಡುವೆ ಎರಡನೇ ಟಿ-20 ಪಂದ್ಯ ನಡೆಯುತ್ತಿತ್ತು. ಇದೇ ವೇಳೆ ಪಾಕಿಸ್ತಾನದ ಜೋಡಿಯೊಂದು ಅಮೆರಿಕಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುಮಧುರ ಸಂದರ್ಭದಲ್ಲಿ ಅವರು ತಮ್ಮ ಮದುವೆ ಸಂಭ್ರಮ ಬದಿಗಿಟ್ಟು ಟಿವಿ ಮುಂದೆ ಕುಳಿತು ಕ್ರಿಕೆಟ್ ನೋಡ್ತಾ ಎಂಜಾಯ್ ಮಾಡಿದ್ದಾರೆ.

ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನವ ಜೋಡಿ ತಾವು ಮದುವೆಯಾಗುತ್ತಿದ್ದ ಸ್ಥಳದಲ್ಲೇ ಆಸ್ಟ್ರೇಲಿಯಾ-ಪಾಕಿಸ್ತಾನದ ನಡುವಿನ ಚುಟುಕು ಕದನ ನೋಡಿದ್ದಾರೆ. ಈ ಕುರಿತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಇದನ್ನು ನೋಡಿರುವ ಐಸಿಸಿ ಕೂಡ ತನ್ನ ಟ್ವಿಟರ್​​ನಲ್ಲಿ ಈ ಫೋಟೋ ಹಂಚಿಕೊಂಡಿದೆ.

ಪಾಕ್‌ ಕ್ರಿಕೆಟ್ ತಂಡದ ಅಭಿಮಾನಿ ಹಸನ್​ ತಲ್ಸಿನ್​​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆಯೂ ಅವರು ಎರಡನೇ ಟಿ-20 ಪಂದ್ಯವನ್ನು ಸಂಪೂರ್ಣವಾಗಿ ವೀಕ್ಷಿಸಿದ್ದಾರೆ.

ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಆಸ್ಟ್ರೇಲಿಯಾ 7ವಿಕೆಟ್​ಗಳ ಅಂತರದಿಂದ ಗೆದ್ದುಕೊಂಡಿದೆ.

ABOUT THE AUTHOR

...view details