ಬರ್ಮಿಂಗ್ಹ್ಯಾಮ್: 2019 ರ ವಿಶ್ವಕಪ್ನಲ್ಲಿ ಅಜೇಯ ತಂಡವಾಗಿದ್ದ ಕಿವೀಸ್ ತಂಡವನ್ನು ಪಾಕಿಸ್ತಾನ ತಂಡ 6 ವಿಕೆಟ್ಗಳಿಂದ ಮಣಿಸುವ ಮೂಲಕ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಪ್ರಚಂಡ ಬೌಲಿಂಗ್ ದಾಳಿಯಿಂದ ಕಿವೀಸ್ ತಂಡವನ್ನು 237 ರನ್ನಿಗೆ ಕಟ್ಟಿಹಾಕಿದ್ದ ಪಾಕಿಸ್ತಾನ 49.1 ಓವರ್ಗಳಲ್ಲಿ 6 ವಿಕೆಟ್ಗಳ ಜಯ ಸಾಧಿಸಿತು.
238 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪಾಕಿಸ್ತಾನ ತಂಡ ಆರಂಭದಲ್ಲಿ ಆಘಾತಕ್ಕೊಳಗಾಯಿತು. ಆರಂಭಿಕರಾದ ಫಖರ್ ಅಜಂ 9 ರನ್ಗಳಿಸಿ ಬೌಲ್ಟ್ ಬೌಲಿಂಗ್ನಲ್ಲಿ ಗಪ್ಟಿಲ್ಗೆ ಕ್ಯಾಚ್ ನೀಡಿ ಔಟಾದರು. ಮತ್ತೊಬ್ಬ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ 19 ರನ್ಗಳಿಸಿ ಫರ್ಗ್ಯುಸನ್ನ್ಗೆ ವಿಕೆಟ್ ಒಪ್ಪಿಸಿದರು.
ಆದರೆ ಬಾಬರ್ ಅಜಂ ಹಾಗೂ ಮೊಹಮ್ಮದ್ ಹಫೀಜ್ 3ನೇ ವಿಕೆಟ್ ಜೊತೆಯಾಟದಲ್ಲಿ 66 ರನ್ಗಳ ಸೇರಿಸಿದರು. 32 ರನ್ಗಳಿಸಿದ್ದ ಹಫೀಜ್ ವಿಲಿಯಮ್ಸನ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಕಳೆದ ಪಂದ್ಯದ ಹೀರೋ ಹ್ಯಾರೀಸ್ ಸೋಹೈಲ್(68) ಹಾಗೂ ಬಾಬರ್ ಅಜಂ(101) ಮುರಿಯದ 4ನೇ ವಿಕೆಟ್ ಜೊತೆಯಾಟದಲ್ಲಿ 138 ರನ್ಗಳಿಸಿ ಗೆಲುವಿನ ಗಡಿ ದಾಟಿಸಿದರು.
ಗೆಲುವಿಗೆ 2 ರನ್ ಅಗತ್ಯವಿದ್ದಾಗ 76 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 68 ರನ್ಗಳಿಸಿದ್ದ ಹ್ಯಾರೀಸ್ ಸೋಹೈಲ್ ರನ್ ಔಟ್ ಆದರು. ಆದರೆ ಇನ್ನಿಂಗ್ಸ್ನ ಕೊನೆಯವರೆಗೂ ಔಟಾಗದೆ ಉಳಿದ ಬಾಬರ್ ಅಜಂ 127 ಎಸೆತಗಳಲ್ಲಿ 11 ಬೌಂಡರಿ ಸಹಿತ 101 ರನ್ಗಳಿಸಿದರು. ಗೆಲುವಿಗೆ ಒಂದು ಅಗತ್ಯವಿದ್ದಾಗ ನಾಯಕ ಸರ್ಫರಾಜ್ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದಿತ್ತರು.