ಲಂಡನ್: ಇಂದಿನ ಪಂದ್ಯವನ್ನು ಹೊರೆತುಪಡಿಸಿದರೆ ವಿಶ್ವಕಪ್ನಲ್ಲಿ 30 ಪಂದ್ಯಗಳು ಮುಗಿದಿದ್ದು , 6 ಪಂದ್ಯಗಳನ್ನಾಡಿರುವ ಪಾಕಿಸ್ತಾನ ಹೆಚ್ಚು ಕ್ಯಾಚ್ ಕೈಚೆಲ್ಲಿ ಕೆಟ್ಟ ದಾಖಲೆ ನಿರ್ಮಿಸಿದೆ.
'ಕ್ಯಾಚಸ್ ವಿನ್ ಮ್ಯಾಚಸ್' ಎನ್ನುವ ಹಾಗೆ ಪಾಕಿಸ್ತಾನ ತಂಡ ಕೆಲವು ಕ್ಯಾಚ್ಗಳನ್ನು ಕೈಬಿಟ್ಟು ಪಂದ್ಯಗಳನ್ನೇ ಕಳೆದುಕೊಂಡಿದೆ. ಇಡೀ ಟೂರ್ನಿಯಲ್ಲಿ 6 ಪಂದ್ಯವಾಡಿರುವ ಪಾಕಿಸ್ತಾನ ತಂಡ 26 ಕ್ಯಾಚ್ ಹಿಡಿದಿದ್ದರೆ, ಬರೋಬ್ಬರಿ 14 ಕ್ಯಾಚ್ ಕೈಚೆಲ್ಲಿದೆ. ಈ ಮೂಲಕ ಅತ್ಯಂತ ಕಳಪೆ ಫೀಲ್ಡಿಂಗ್ ಮಾಡುತ್ತಿರುವ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.