ಕರ್ನಾಟಕ

karnataka

ETV Bharat / sports

ಪಾಕಿಸ್ತಾನ ಪ್ರೀಮಿಯರ್​ ಲೀಗ್ 'ಬೆಸ್ಟ್​ 11'​ ವಿರುದ್ಧ​ 'ಐಪಿಎಲ್ ಬೆಸ್ಟ್​ ​11'​ ಸೋಲಲಿದೆ: ಅಬ್ದುಲ್​ ರಜಾಕ್​ - ಅಬ್ದುಲ್​ ರಜಾಕ್​

ವಿಶ್ವದ ಶ್ರೀಮಂತ ಟಿ20 ಲೀಗ್ ಆಗಿರುವ ಐಪಿಎಲ್​ನ ಅತ್ಯುತ್ತಮ ತಂಡವನ್ನು ಪಿಎಸ್​ಎಲ್​ನ ಅತ್ಯುತ್ತಮ ತಂಡ ಸೋಲಿಸಲಿದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Abdul Razzaq
Abdul Razzaq

By

Published : Jan 22, 2020, 2:29 PM IST

ನವದೆಹಲಿ:ಜಸ್ಪ್ರೀತ್​ ಬುಮ್ರಾರನ್ನು ಬೇಬಿ ಬೌಲರ್​ ಎಂದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಆಲ್​ರೌಂಡರ್​ ಅಬ್ದುಲ್​ ರಜಾಕ್​ ಇದೀಗ ಮತ್ತೆ ಭಾರತೀಯರನ್ನು ಕೆಣಕಿದ್ದಾರೆ.

ವಿಶ್ವದ ಶ್ರೀಮಂತ ಟಿ20 ಲೀಗ್ ಆಗಿರುವ ಐಪಿಎಲ್​ನ ಅತ್ಯುತ್ತಮ ತಂಡವನ್ನು ಪಿಎಸ್​ಎಲ್​ನ ಅತ್ಯುತ್ತಮ ತಂಡ ಸೋಲಿಸಲಿದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ ಅತ್ಯುತ್ತಮ ಆಟಗಾರರು ಹಾಗೂ ಐಪಿಎಲ್​ನ ಅತ್ಯುತ್ತಮ ಆಟಗಾರರನ್ನು ಸ್ಪರ್ಧೆಗಿಳಿಸಿದರೆ ಪಿಎಸ್​ಎಲ್​ ಅತ್ಯುತ್ತಮ ತಂಡ ಸುಲಭವಾಗಿ ಗೆಲ್ಲಲಿದೆ ಎಂದು ಪಾಕಿಸ್ತಾನ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ರಜಾಕ್​ ತಿಳಿಸಿದ್ದಾರೆ.

ರಜಾಕ್​ ಹೇಳಿಕೆಯನ್ನು ಪಾಕಿಸ್ತಾನಿ ಕ್ರೀಡಾ ಲೇಖಕರೊಬ್ಬರು ಟ್ವೀಟ್​ ಮಾಡಿದ್ದು, ಇದಕ್ಕೆ ಭಾರತೀಯ ಅಭಿಮಾನಿಗಳು ಕಿಡಿಕಾರಿದ್ದಾರೆ. ಐಪಿಎಲ್​ನ ಪ್ರತಿಯೊಂದು ತಂಡವೂ ಪಾಕಿಸ್ತಾನ ಪ್ರೀಮಿಯರ್​ ಲೀಗ್​ನ ಅತ್ಯುತ್ತಮ ತಂಡವನ್ನು ಸೋಲಿಸಲಿದೆ ಎಂದು ಟ್ವೀಟ್​ಗೆ ಉತ್ತರಿಸುತ್ತಿದ್ದಾರೆ. ಇನ್ನು ಕೆಲವರು ಐಪಿಎಲ್​ ವಿಶ್ವದ ಅತ್ಯುತ್ತಮ ಲೀಗ್​ಗಲ್ಲಿ ಮೊದಲ ಸ್ಥಾನದಲ್ಲಿದ್ದರೆ ಪಿಎಸ್​ಎಲ್​ ಕೊನೆಯ ಸ್ಥಾನದಲ್ಲಿದೆ ಎಂದು ಕಾಲೆಳೆದಿದ್ದಾರೆ.

ಅಲ್ಲದೆ ಪಿಎಸ್​ನಲ್ಲಿ ಆಡುತ್ತಿರುವ ಎಲ್ಲಾ ವಿದೇಶಿ ಆಟಗಾರರು ಐಪಿಎಲ್​ನಲ್ಲಿ ಆಡುತ್ತಿರುವವರೇ ಆಗಿದ್ದಾರೆ. ಸ್ಪರ್ಧೆ ಏರ್ಪಟ್ಟರೆ ಪಾಕಿಸ್ತಾನ್​ ಲೀಗ್​ ಪರ ಆಡುವರು ಯಾರು ಎಂದು ರಜಾಕ್​ ಹೇಳಿಕೆಯನ್ನು ಟ್ರೋಲ್​ ಮಾಡಿದ್ದಾರೆ.

ABOUT THE AUTHOR

...view details