ಕರ್ನಾಟಕ

karnataka

ETV Bharat / sports

ದಶಕಗಳ ನಂತರ 2021ರಲ್ಲಿ ಈ ಟಾಪ್​ ತಂಡಗಳಿಗೆ ಆತಿಥ್ಯ ನೀಡುತ್ತಿದೆ ಪಾಕಿಸ್ತಾನ! - world test championship

ದಕ್ಷಿಣ ಆಫ್ರಿಕಾ ತಂಡ ಜನವರಿಯಲ್ಲಿ ಪಾಕಿಸ್ತಾನದಲ್ಲಿ ವಿಶ್ವಚಾಂಪಿಯನ್​ಶಿಪ್​ ಭಾಗವಾಗಿ 2 ಪಂದ್ಯಗಳ ಟೆಸ್ಟ್​ ಸರಣಿ ಹಾಗೂ 3 ಟಿ-20 ಪಂದ್ಯಗಳನ್ನಾಡಲಿದೆ.

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ

By

Published : Nov 21, 2020, 4:52 PM IST

ಇಸ್ಲಮಾಬಾದ್: ಸುಮಾರು ಒಂದು ದಶಕಗಳ ನಂತರ ಪಾಕಿಸ್ತಾನ ತಂಡ ಟಾಪ್​ ತಂಡಗಳಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಆತಿಥ್ಯ ನೀಡಲು ಸಜ್ಜಾಗುತ್ತಿದೆ. 2009ರ ಉಗ್ರರ ದಾಳಿ ನಂತರ ಇದೇ ಮೊದಲ ಬಾರಿಗೆ ಮಂಚೂಣಿ ಕ್ರಿಕೆಟ್ ರಾಷ್ಟ್ರಗಳಾದ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ವಿರುದ್ಧ ತವರಿನಲ್ಲಿ ಟೆಸ್ಟ್​ ಸರಣಿಗಳನ್ನಾಡಲಿದೆ.

"ನಾವು ಇತರೆ ಕ್ರಿಕೆಟ್​ ಮಂಡಳಿಗಳೊಂದಿಗೆ ಸಂಬಂಧಗಳನ್ನು ಪೋಷಿಸುತ್ತಿದ್ದೇವೆ ಮತ್ತು ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಭಾರೀ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದೇವೆ"ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸಿಮ್ ಖಾನ್ ಹೇಳಿದ್ದಾರೆ.

"ಮುಂದಿನ ವರ್ಷದ 10 ತಿಂಗಳವರೆಗೆ ಹಲವು ಸರಣಿಗಳನ್ನು ಆಡಲಿದ್ದೇವೆ. ದ.ಆಫ್ರಿಕಾ, ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್​ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿವೆ. ನಾವು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಜೊತೆಗೂ ಮಾತುಕತೆ ನಡೆಸಿದ್ದೇವೆ. ಅವರೂ ಕೂಡ 2022ರ ಆವೃತ್ತಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ" ಎಂದು ಖಾನ್​ ವಿವರಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಜನವರಿಯಲ್ಲಿ ಪಾಕಿಸ್ತಾನದಲ್ಲಿ ವಿಶ್ವಚಾಂಪಿಯನ್​ಶಿಪ್​ ಭಾಗವಾಗಿ 2 ಪಂದ್ಯಗಳ ಟೆಸ್ಟ್​ ಸರಣಿ ಹಾಗೂ 3 ಟಿ-20 ಪಂದ್ಯಗಳನ್ನಾಡಲಿದೆ.

ನಂತರ ನ್ಯೂಜಿಲ್ಯಾಂಡ್​ ವಿರುದ್ಧ ಸೆಪ್ಟೆಂಬರ್​ನಲ್ಲಿ 3 ಏಕದಿನ ಪಂದ್ಯಗಳ ಸರಣಿ ಮತ್ತು 2 ಟಿ-20 ಪಂದ್ಯಗಳನ್ನಾಡಲಿದೆ. ನಂತರ ಇಂಗ್ಲೆಂಡ್​ ವಿರುದ್ಧ ಕರಾಚಿಯಲ್ಲಿ 2 ಟಿ-20 ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್​ ತಂಡ 2005ರ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿದೆ. ಜೊತೆಗೆ ಪಿಸಿಬಿ ಡಿಸೆಂಬರ್​ನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ತವರು ಸರಣಿಯೊಂದನ್ನು ಆಯೋಜಿಸಲು ಯೋಜನೆ ರೂಪಿಸುತ್ತಿದೆ.

2009ರ ಮಾರ್ಚ್​ನಲ್ಲಿ ಶ್ರೀಲಂಕಾ ತಂಡದ ಬಸ್ ಭಯೋತ್ಪಾದಕ ದಾಳಿಗೆ ಒಳಗಾಗಿತ್ತು. ಈ ಘಟನೆಯಲ್ಲಿ 6 ಪೊಲೀಸರು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಈ ಘಟನೆ ನಂತರ ಯಾವ ತಂಡಗಳೂ ಪಾಕಿಸ್ತಾನ ಪ್ರವಾಸ ಕೈಗೊಂಡಿರಲಿಲ್ಲ. 2015ರಲ್ಲಿ ಜಿಂಬಾಬ್ವೆ ತಂಡ ಮೊದಲ ಟೆಸ್ಟ್​ ಆಡುವ ರಾಷ್ಟ್ರವಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆದಾದ ನಂತರ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ವೆಸ್ಟ್​ ಇಂಡೀಸ್ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದವು.

ABOUT THE AUTHOR

...view details