ಕರ್ನಾಟಕ

karnataka

By

Published : Jul 30, 2019, 7:00 PM IST

ETV Bharat / sports

ಪಾಕ್​ ವೇಗಿ​ ಕೈ ಹಿಡಿಯಲಿರುವ ಭಾರತೀಯ ವಧು; ದುಬೈನಲ್ಲಿ ಶಾದಿ

ಪಾಕ್​​ನ ಮಾಜಿ ಆಲ್​ರೌಂಡರ್ ಶೊಯೆಬ್​ ಮಲಿಕ್​ ಜತೆ ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹಳೆಯ ವಿಚಾರ. ಇದರ ಮಧ್ಯೆ ಮತ್ತೋರ್ವ ಭಾರತೀಯ ವಧು ಪಾಕ್​​ ವೇಗದ ಬೌಲರ್​​ ಕೈಹಿಡಿಯಲು ನಿರ್ಧಾರಿಸಿದ್ದಾರೆ.

ಪಾಕ್ ವೇಗದ ಬೌಲರ್​ ಹಸನ್​ ಅಲಿ

ಹೈದರಾಬಾದ್​​:ಕೆಲ ವರ್ಷಗಳ ಹಿಂದಷ್ಟೇ,ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಪಾಕ್​​ನ ಮಾಜಿ ಆಲ್​ರೌಂಡರ್​ ಶೊಯೆಬ್​ ಮಲಿಕ್​ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಮತ್ತೋರ್ವ ಭಾರತೀಯ ಯುವತಿ ಪಾಕ್​​​ ಕ್ರಿಕೆಟಿಗನ​ ಕೈ ಹಿಡಿಯಲು ತೀರ್ಮಾನಿಸಿದ್ದಾರೆ.

ಹಸನ್​ ಅಲಿ ಜತೆ ಹರಿಯಾಣದ ಮಿವತ್​​​ನ ಶಮಿಯಾ ಅಝ್ರೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ದುಬೈನ ಅಟ್ಲಾಂಟಿಸ್​ ಪಾಮ್​ ಹೋಟೆಲ್​​ನಲ್ಲಿ ಆಗಸ್ಟ್​​ 20ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ. ಶಮಿಯಾ ಮಾನವ್‌ ರಚನಾ ಯೂನಿವರ್ಸಿಟಿಯಲ್ಲಿ ಏರೊನಾಟಿಕಲ್ಸ್‌ನಲ್ಲಿ ಬಿ.ಟೆಕ್‌ ಪದವಿ ಪಡೆದುಕೊಂಡಿದ್ದಾರೆ. ಈ ಹಿಂದೆ ಜೆಟ್​ ಏರ್​ವೇಸ್​​ನಲ್ಲಿ ಕೆಲಸ ಮಾಡುತ್ತಿದ್ದ ಇವರು ಸದ್ಯ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯಲ್ಲಿ ಫ್ಲೈಟ್‌ ಎಂಜಿನೀಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ಮಾಡಿದ್ದ ಹಸನ್​ ಅಲಿ ಬರೋಬ್ಬರಿ 84 ರನ್​ ಬಿಟ್ಟು ಕೊಟ್ಟು ದುಬಾರಿ ಬೌಲರ್​ ಆಗಿದ್ದರು. ಅದಾದ ಬಳಿಕ ಕೆಲ ಪಂದ್ಯಗಳಿಂದ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಪಾಕಿಸ್ತಾನದ ಕ್ರಿಕೆಟರ್​​ಗಳಾದ ಜಹೀರ್​ ಅಬ್ಬಾಸ್​​, ಮೊಸಿನ್​ ಹಸನ್​ ಖಾನ್​ ಈಗಾಗಲೇ ಭಾರತೀಯ ಮೂಲದ ಯುವತಿಯರನ್ನು ವಿವಾಹವಾಗಿದ್ದಾರೆ.

ABOUT THE AUTHOR

...view details