ಕ್ಯಾನ್ಬೆರಾ: ಮಹಿಳಾ ಟಿ-20 ವಿಶ್ವಕಪ್ನಲ್ಲಿ ಬಲಿಷ್ಠ ತಂಡವಾದ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ತಂಡ 8 ವಿಕೆಟ್ಗಳ ಭರ್ಜರಿ ಜಯಗಳಿಸಿ ಶುಭಾರಂಭ ಮಾಡಿದೆ.
ಕ್ಯಾನ್ಬೆರಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ಮಹಿಳೆಯರು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್ಗಳಿಸಿದರು. ನಾಯಕಿ ಸ್ಟೆಫನಿ ಟೇಲರ್ 43, ವಿಕೆಟ್ ಕೀಪರ್ ಶೆಮೈನ್ ಕ್ಯಾಂಪ್ಬೆಲ್ 36 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗ ಎರಡು ಸಿಕ್ಸರ್ ನೆರವಿನಿಂದ 43 ರನ್ಗಳಿಸಿ ತಂಡದ ಮೊತ್ತ 100 ರ ಗಡಿದಾಟಲು ನೆರವಾದರು.
ವೆಸ್ಟ್ ಇಂಡೀಸ್ - ಪಾಕಿಸ್ತಾನ ಪಂದ್ಯದ ಹೈಲೈಟ್ಸ್ ಇನ್ನು ಮೊದಲ ಪಂದ್ಯದಲ್ಲೇ ಉತ್ತಮ ಬೌಲಿಂಗ್ ದಾಳಿ ನಡೆಸಿದ ಪಾಕಿಸ್ತಾನದ ದಿಯಾನ ಬೇಗ್ 2, ಐಮನ್ ಅನ್ವರ್ 2, ನಿಡಾ ದಾರ್ 2 ಹಾಗೂ ಅನಮ್ ಅಮಿನ್ ಒಂದು ವಿಕೆಟ್ ಪಡೆದು ವಿಂಡೀಸ್ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
125 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡದ ಆರಂಭಿಕರಾದ ಮುನೀಬಾ ಅಲಿ(25), ಜವೇರಿಯಾ ಖಾನ್(35), ನಾಯಕಿ ಬಿಸ್ಮಾ ಮರೂಫ್ ಔಟಾಗದೇ 38 ಹಾಗೂ ನಿಡಾ ದಾರ್ ಔಟಾಗದೆ 18 ರನ್ಗಳಿಸಿ ತಂಡವನ್ನು ಗೆಲುವಿನ ಗಡಿದಾಟಿಸಿದರು.
ಈ ಗೆಲುವಿನ ಮೂಲಕ ಪಾಕಿಸ್ತಾನ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. 35 ರನ್ಗಳಿಸಿದ ಜವೇರಿಯಾ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.