ಇಸ್ಲಾಮಾಬಾದ್:ಪಾಕ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಮಿಸ್ಬಾ ಉಲ್ ಹಕ್ ಇದೇ ಮೊದಲ ಬಾರಿಗೆ ತಮ್ಮ ಸ್ಯಾಲರಿ ವಿಷಯವಾಗಿ ಬಹಿರಂಗವಾಗಿ ಮಾತನಾಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಪಾಕ್ ಕ್ರಿಕೆಟ್ ಮಂಡಳಿ ಅವರಿಗೆ ವರ್ಷಕ್ಕೆ 3.4ಕೋಟಿ ರೂ ಹಣ ನೀಡುತ್ತಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಪ್ರತಿ ತಿಂಗಳು 28 ಲಕ್ಷ ರೂ ಸಂಬಳ ಪಡೆದುಕೊಳ್ಳುತ್ತಿದ್ದಾರೆ.
ಶಾಸ್ತ್ರಿ ಅರ್ಧದಷ್ಟಿಲ್ಲ ಪಾಕ್ ಕೋಚ್ ಮಿಸ್ಬಾ ಸಂಬಳ... ಆದ್ರೂ ನಿಬಾಯಿಸ್ತಾರೆ ಎರಡು ಕೆಲಸ! - ಪಾಕ್ ಕ್ರಿಕೆಟ್ ಮಂಡಳಿ
ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಇದೇ ಮೊದಲ ಬಾರಿಗೆ ತಮ್ಮ ಸಂಬಳದ ವಿಚಾರವಾಗಿ ಬಹಿರಂಗವಾಗಿ ಮಾತನಾಡಿದ್ದಾರೆ.
ಶ್ರೀಲಂಕಾ ವಿರುದ್ಧ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಗೂ ಮುಂಚಿತವಾಗಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಮಿಸ್ಬಾ, ಈ ಹುದ್ದೆ ಪಡೆದುಕೊಳ್ಳಲು ನಾನು ಯಾವುದೇ ರೀತಿಯ ಮ್ಯಾಜಿಕ್ ನಡೆಸಿಲ್ಲ. ಸ್ಯಾಲರಿ ವಿಷಯವಾಗಿ ಬೋರ್ಡ್ ಮುಂದೆ ಯಾವುದೇ ಬೇಡಿಕೆ ಸಹ ಇಟ್ಟಿಲ್ಲ. ಆದರೆ, ಈ ಹಿಂದಿನ ಕೋಚ್ ಮಿಕ್ಕಿ ಆರ್ಥರ್ಗೆ ನೀಡುತ್ತಿದ್ದ ಸಂಬಳವನ್ನೇ ತಮಗೂ ನೀಡುವಂತೆ ತಿಳಿಸಿದ್ದಾಗಿ ಹೇಳಿದ್ದಾರೆ.
ಮಿಸ್ಬಾ ಉಲ್ ಹಕ್ ಪಾಕ್ ತಂಡದ ಕೋಚ್ ಜತೆಗೆ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಬೇಕಾಗಿದ್ದು, ಅದಕ್ಕಾಗಿ ಯಾವುದೇ ರೀತಿಯ ಹೆಚ್ಚುವರಿ ಸಂಬಳ ಪಡೆದುಕೊಳ್ಳುತ್ತಿಲ್ಲ. ಇನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ವರ್ಷಕ್ಕೆ 9.5ಕೋಟಿ ರೂದಿಂದ 10 ಕೋಟಿ ರೂವರೆಗೆ ಸ್ಯಾಲರಿ ಪಡೆದುಕೊಳ್ಳುತ್ತಿದ್ದಾರೆ.