ಲಾಹೋರ್( ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಮಡದಿ 5ನೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ವಿಶ್ವಕಂಡ ಶ್ರೇಷ್ಠ ಆಲ್ರೌಂಡರ್ ಶಾಹೀದ್ ಅಫ್ರಿದಿಗೆ ಈ ಮೊದಲು ಅಜ್ವಾ ಅಫ್ರಿದಿ, ಅನ್ಶಾ ಅಫ್ರಿದಿ, ಅಕ್ಸಾ ಅಫ್ರಿದಿ, ಅಸ್ಮಾರಾ ಅಫ್ರಿದಿ ಎಂಬ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಇದೀಗ ಐದನೇ ಹೆಣ್ಣು ಮಗು ಆಫ್ರಿದಿ ಮನೆಗೆ ಆಗಮಿಸಿದೆ.
"ಸರ್ವಶಕ್ತನ ಅನಂತ ಆಶೀರ್ವಾದ ಮತ್ತು ಕರುಣೆ ನನ್ನ ಮೇಲಿದೆ. ಈಗಾಗಲೇ 4 ಅದ್ಭುತ ಹೆಣ್ಣು ಮಕ್ಕಳನ್ನು ಪಡೆದಿದ್ದೇನೆ. ನನಗೆ ದೇವರು (ಅಲ್ಹಮ್ದುಲಿಲ್ಲಾಹ್) 5ನೇ ಹೆಣ್ಣು ಮಗುವನ್ನು ಆಶೀರ್ವದಿಸಿದ್ದಾನೆ. ಈ ಶುಭ ಸುದ್ದಿಯನ್ನು ನನ್ನ ಹಿತೈಷಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾಲ್ಕು ಇದ್ದದ್ದು ಐದಾಯ್ತು(#FourbecomeFive) ಅಂತಾ ಟ್ವೀಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶಾಹಿದ್ ಅಫ್ರಿದಿಗೆ ಹಲವು ಹಾಲಿ ಮಾಜಿ ಕ್ರಿಕೆಟಿಗರು ಶುಭಕೋರುತ್ತಿದ್ದರೆ, ಕೆಲವರು ಜನಸಂಖ್ಯಾ ಸ್ಫೋಟದಿಂದ ದೇಶ ತತ್ತರಿಸುತ್ತಿರುವಾಗ ಒಬ್ಬ ಸೆಲೆಬ್ರಿಟಿಯಾಗಿ ಗಂಡು ಮಗುವಿನ ಆಸೆಗೆ ಇಷ್ಟು ಮಕ್ಕಳನ್ನು ಪಡೆಯುತ್ತರುವುದು ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಸಾರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅಫ್ರಿದಿ ಕ್ರಿಕೆಟ್ ತಂಡ ಸಿದ್ದಪಡಿಸಲು ಸಿದ್ದರಾಗುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.